ಪರ್ವತದ ಇಳಿಜಾರಿನಲ್ಲಿ ಹೆದ್ದಾರಿಯಿಂದ ನದಿಗೆ ಉರುಳಿ ಬಿದ್ದ ಬಸ್; 17 ಮಂದಿ ಸಾವು, 24 ಜನರಿಗೆ ಗಾಯ | Bus Accident

ಘಟನೆಯ ಸ್ಥಳ
ಘಟನೆಯ ಸ್ಥಳ
Published on
ಕಠ್ಮಂಡು: ನೇಪಾಳದಲ್ಲಿ ಪೋಖರಾದಿಂದ ರಾಜಧಾನಿ ಕಠ್ಮಂಡುವಿಗೆ ತೆರಳುತ್ತಿದ್ದ ಬಸ್ಸೊಂದು ಸೋಮವಾರ(ಫೆ. 23) ಮುಂಜಾನೆ ಪರ್ವತ ಪ್ರದೇಶದ ಇಳಿಜಾರಿನ ಹೆದ್ದಾರಿಯಿಂದ ನದಿಗೆ ಉರುಳಿ ಬಿದ್ದಿದ್ದು, ಪರಿಣಾಮ 17 ಮಂದಿ ಮೃತಪಟ್ಟು, 24 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಸ್ಥಳೀಯ ಪೊಲೀಸರು, ಮಧ್ಯರಾತ್ರಿ ರೆಸಾರ್ಟ್ ನಗರಿ ಪೋಖರಾದಿಂದ ತೆರಳುತ್ತಿದ್ದಾಗ ಕಠ್ಮಂಡುವಿನಿಂದ ಪಶ್ಚಿಮಕ್ಕೆ ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ಬೆನಿಘಾಟ್ ಬಳಿಯ ತ್ರಿಶೂಲಿ ನದಿಯ ದಡದಲ್ಲಿ ಉರುಳಿ ಬಿದ್ದಿದೆ ಎಂದು ತಿಳಿಸಿದ್ದಾರೆ.
ಅಪಘಾತದ ಮಾಹತಿ ತಿಳಿದ ತಕ್ಷಣ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತಲುಪಿದ್ದು, ಅವಶೇಷಗಳಡಿ ಸಿಲುಕಿದ್ದ ಗಾಯಾಳುಗಳನ್ನು ಹೊರ ತಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಪಘಾತದ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ನೇಪಾಳ ದೇಶ ಬಹುಪಾಲು ಪರ್ವತಗಳಿಂದ ಆವೃತವಾಗಿದ್ದು, ಕಿರಿದಾದ ರಸ್ತೆಗಳಿಂದ ಮಾತ್ರ ಸಂಪರ್ಕ ಹೊಂದಿದ್ದು, ಅಪಘಾತಗಳು ಸಾಮಾನ್ಯವಾಗಿದೆ. 65 ಜನರನ್ನು ಹೊತ್ತೊಯ್ಯುತ್ತಿದ್ದ ಎರಡು ಬಸ್‌ಗಳು 2024ರಲ್ಲಿ ಅದೇ ನದಿಗೆ ಬಿದ್ದು ಕಳೆದುಹೋಗಿದ್ದವು. ಅದರಲ್ಲಿದ್ದ ಹೆಚ್ಚಿನವರು ಸಾವನ್ನಪ್ಪಿದರು ಮತ್ತು ಹಲವರು ಕಾಣೆಯಾಗಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net