

ಪ್ರಮುಖ ಮುಖ್ಯಾಂಶಗಳು
ಯಾರೂ ಗುರುತಿಸಬಾರದೆಂದು ಬುರ್ಖಾ ಧರಿಸಿದ್ದ ಈ ಗ್ಯಾಂಗ್ನ ಸದಸ್ಯರು, ಮೊದಲು ಅಂಗಡಿಯ ಒಳಗೆ ಬಂದು ಏನೂ ಅರಿಯದ ಗ್ರಾಹಕರಂತೆ ವರ್ತಿಸಿದ್ದಾರೆ. ಗ್ಯಾಂಗ್ನ ಕೆಲವರು ಅಂಗಡಿಯ ಮಾರಾಟಗಾರರ ಮತ್ತು ಸಿಬ್ಬಂದಿಯ ಗಮನವನ್ನು ಬೇರೆಡೆಗೆ ಸೆಳೆಯಲು ಸುಮ್ಮನೆ ಮಾತನಾಡಲು ಶುರುವಿಟ್ಟಿದ್ದಾರೆ.
ಆಗಸ್ಟ್ 16 ರಂದು ಜಹೀರಾಬಾದ್ನ ಜೈ ಭವಾನಿ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿದ ಬುರ್ಖಾಧಾರಿ ಮಹಿಳೆಯರ ಗುಂಪು, ಸಿಬ್ಬಂದಿಗೆ ಮೂಗಿನ ಪಿನ್ ತೋರಿಸಲು ಹೇಳಿ ದಿಢೀರ್ ಎಂದು 70 ಗ್ರಾಂ ಚಿನ್ನದ ಸರವನ್ನು ಕದ್ದುಕೊಂಡು ಪರಾರಿಯಾಗಿತ್ತು.
ಆಗಸ್ಟ್ 6 ರಂದು ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ತಂದೂರ್ನಲ್ಲಿ ಇದೇ ರೀತಿಯ ತಂಡವೊಂದು 10 ಗ್ರಾಂ ಚಿನ್ನದ ಸರವನ್ನು ದೋಚಿದ್ದ ಸಿಸಿಟಿವಿ ದೃಶ್ಯಗಳು ವೈರಲ್ ಆಗಿದ್ದವು.