ಷೇರು ಮಾರುಕಟ್ಟೆಯಲ್ಲಿ ಗೂಳಿ ಸವಾರಿ: ಭಾರತ-EU ವ್ಯಾಪಾರ ಒಪ್ಪಂದದ ಬೆನ್ನಲ್ಲೇ ಸೆನ್ಸೆಕ್ಸ್ 300 ಪಾಯಿಂಟ್ಸ್ ಜಂಪ್! | Share Market

Share Market
Share Market
Published on
ಮುಂಬೈ: ದೀರ್ಘಕಾಲದ ಮಾತುಕತೆಗಳ ನಂತರ ಭಾರತ ಮತ್ತು ಯುರೋಪಿಯನ್ ಯೂನಿಯನ್ (EU) ನಡುವೆ 'ಮುಕ್ತ ವ್ಯಾಪಾರ ಒಪ್ಪಂದ' (Free Trade Agreement) ಅಂತಿಮಗೊಂಡಿದೆ. ಈ ಸುದ್ಧಿ ಹೊರಬೀಳುತ್ತಿದ್ದಂತೆಯೇ ದೇಶದ ಷೇರು ಮಾರುಕಟ್ಟೆಯಲ್ಲಿ(Share Market) ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು, ಹೂಡಿಕೆದಾರರು ಭಾರಿ ಲಾಭ ಗಳಿಸಿದ್ದಾರೆ.
ಮಂಗಳವಾರದ ವಹಿವಾಟಿನ ಅಂತ್ಯಕ್ಕೆ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ (Sensex) 300ಕ್ಕೂ ಹೆಚ್ಚು ಅಂಕಗಳ ಏರಿಕೆ ಕಂಡು 81,857.48 ಮಟ್ಟದಲ್ಲಿ ಸ್ಥಿರವಾಯಿತು. ಅದೇ ರೀತಿ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ (Nifty) ಶೇ. 0.5ರಷ್ಟು ಚೇತರಿಕೆ ಕಂಡು 25,175.40 ಪಾಯಿಂಟ್‌ಗಳಿಗೆ ತಲುಪಿದೆ.

ಯಾರಿಗೆ ಲಾಭ? ಯಾರಿಗೆ ನಷ್ಟ?

ಟಾಪ್ ಗೇನರ್ಸ್: ಅದಾನಿ ಪೋರ್ಟ್ಸ್ (Adani Ports), ಆಕ್ಸಿಸ್ ಬ್ಯಾಂಕ್ (Axis Bank) ಮತ್ತು ಟಾಟಾ ಸ್ಟೀಲ್ (Tata Steel) ಷೇರುಗಳು ಇಂದಿನ ವಹಿವಾಟಿನಲ್ಲಿ ಅತಿ ಹೆಚ್ಚು ಲಾಭ ಗಳಿಸಿದವು. ಮುಕ್ತ ವ್ಯಾಪಾರದಿಂದ ಬಂದರು ವಹಿವಾಟು ಮತ್ತು ಲೋಹದ ರಫ್ತು ಹೆಚ್ಚಾಗಲಿದೆ ಎಂಬ ನಿರೀಕ್ಷೆಯೇ ಇದಕ್ಕೆ ಪ್ರಮುಖ ಕಾರಣ.
ಟಾಪ್ ಲೂಸರ್ಸ್: ಮಾರುಕಟ್ಟೆ ಹಸಿರು ನಿಶಾನೆ ತೋರಿಸಿದ್ದರೂ, ಮಹೀಂದ್ರಾ ಅಂಡ್ ಮಹೀಂದ್ರಾ (M&M) ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳು ಲಾಭ ಬುಕಿಂಗ್‌ ಕಾರಣದಿಂದ ಅಲ್ಪ ಕುಸಿತ ಕಂಡಿವೆ.

ಏನಿದು ಭಾರತ-EU ಒಪ್ಪಂದ? ಇದು ಏಕೆ ಮುಖ್ಯ?

ಯುರೋಪಿಯನ್ ಯೂನಿಯನ್ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರರಲ್ಲಿ ಒಂದು. ಈ ಹೊಸ ಒಪ್ಪಂದದ ಮೂಲಕ ಜವಳಿ, ಚರ್ಮದ ವಸ್ತುಗಳು ಮತ್ತು ಕೃಷಿ ಉತ್ಪನ್ನಗಳ ಮೇಲಿನ ರಫ್ತು ಸುಂಕ ಗಣನೀಯವಾಗಿ ಕಡಿಮೆಯಾಗಲಿದೆ.
ಯುರೋಪಿನ ಕಂಪನಿಗಳು ಭಾರತದಲ್ಲಿ ಹೆಚ್ಚಿನ ಬಂಡವಾಳ ಹೂಡಲು ಇದು ಸುಗಮ ಹಾದಿ ಮಾಡಿಕೊಡಲಿದೆ. ವ್ಯಾಪಾರ ವಹಿವಾಟು ಹೆಚ್ಚಾದಂತೆ ಉತ್ಪಾದನಾ ವಲಯದಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ಷೇರು ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಈ ಒಪ್ಪಂದವು ದೀರ್ಘಾವಧಿಯಲ್ಲಿ ಭಾರತೀಯ ರೂಪಾಯಿಯ ಮೌಲ್ಯವನ್ನು ವೃದ್ಧಿಸುವುದಲ್ಲದೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರನ್ನು (FII) ಭಾರತದತ್ತ ಆಕರ್ಷಿಸಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net