ದೆಹಲಿಯಲ್ಲಿ ಬುಲ್ಡೋಜರ್ ಸದ್ದು: ಟರ್ಕ್‌ಮನ್ ಗೇಟ್ ಮಸೀದಿ ಆಸ್ತಿ ನೆಲಸಮಕ್ಕೆ ಅಸಾದುದ್ದೀನ್ ಓವೈಸಿ ತೀವ್ರ ಆಕ್ರೋಶ | Asaduddin Owaisi

ದೆಹಲಿಯಲ್ಲಿ ಬುಲ್ಡೋಜರ್ ಸದ್ದು: ಟರ್ಕ್‌ಮನ್ ಗೇಟ್ ಮಸೀದಿ ಆಸ್ತಿ ನೆಲಸಮಕ್ಕೆ ಅಸಾದುದ್ದೀನ್ ಓವೈಸಿ ತೀವ್ರ ಆಕ್ರೋಶ
ದೆಹಲಿಯಲ್ಲಿ ಬುಲ್ಡೋಜರ್ ಸದ್ದು: ಟರ್ಕ್‌ಮನ್ ಗೇಟ್ ಮಸೀದಿ ಆಸ್ತಿ ನೆಲಸಮಕ್ಕೆ ಅಸಾದುದ್ದೀನ್ ಓವೈಸಿ ತೀವ್ರ ಆಕ್ರೋಶ
Published on
ನವದೆಹಲಿ: ದೆಹಲಿಯ ಟರ್ಕ್‌ಮನ್ ಗೇಟ್ ಬಳಿ ಮಧ್ಯರಾತ್ರಿ ನಡೆದ ಕಟ್ಟಡ ಧ್ವಂಸ ಕಾರ್ಯಾಚರಣೆಯ ನಂತರ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ(Asaduddin Owaisi) ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಓವೈಸಿ, ಇತ್ತೀಚೆಗೆ ಅಂಗೀಕರಿಸಲಾದ ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ಅಧಿಕಾರಿಗಳು ಮುಸ್ಲಿಂ ಧಾರ್ಮಿಕ ಆಸ್ತಿಗಳನ್ನು ಕಬಳಿಸಲು ಒಂದು ಸಾಧನವಾಗಿ ಬಳಸುತ್ತಿದ್ದಾರೆ. ಕೆಡವಲಾದ ಸ್ಥಳವನ್ನು ಅಧಿಕೃತವಾಗಿ ವಕ್ಫ್ ಭೂಮಿ ಎಂದು ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ಓವೈಸಿ ಹೇಳಿದ್ದೇನು..?

ದೆಹಲಿಯನ್ನು ನೆಡೆದ ಘಟನೆಯು ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧದ ಒಂದು ಗಲಭೆಯ ತಾಣವನ್ನಾಗಿ ಪರಿವರ್ತಿಸಿದರು, ಅಲ್ಲದೆ, ಇದು ಕಪ್ಪು ಕಾನೂನು ಎಂದು ಓವೈಸಿ ಕಿಡಿಕಾರಿದ್ದಾರೆ.
1970 ರ ಗೆಜೆಟ್ ಅಧಿಸೂಚನೆಯ ಪುರಾವೆಗಳನ್ನು ಮಂಡಿಸಿದ ಓವೈಸಿಯು, ಕೆಡವಲಾದ ಮಸಿದಿ ಆಸ್ತಿ ಸಂಪೂರ್ಣವಾಗಿ ವಕ್ಫ್ ಮಂಡಳಿಗೆ ಸೇರಿದೆ. ದೆಹಲಿ ವಕ್ಫ್ ಮಂಡಳಿಯು ಗೆಜೆಟ್ ದಾಖಲೆಗಳನ್ನು ಪ್ರಸ್ತುತಪಡಿಸಲು ಅಥವಾ ಪರಿಶೀಲನಾ ಅರ್ಜಿಯನ್ನು ಸಲ್ಲಿಸಲು ವಿಫಲವಾದ ಕಾರಣ ಹೈಕೋರ್ಟ್ ಅನ್ನು ದಾರಿ ತಪ್ಪಿಸಲಾಗಿದೆ ನೀಡಲಾಗಿದೆ ಎಂದು ಓವೈಸಿ ಆರೋಪಿಸಿದ್ದಾರೆ.
ಮುಂದುವರೆದು ಮಾತನಾಡಿದ ಓವೈಸಿ, ಹೊಸ ಕಾನೂನು ಚೌಕಟ್ಟಿನ ಅಡಿಯಲ್ಲಿ ಮಸೀದಿಗಳು, ಸ್ಮಶಾನಗಳು ಮತ್ತು ದೇವಾಲಯಗಳನ್ನು ವಶಪಡಿಸಿಕೊಳ್ಳುವ ರಾಷ್ಟ್ರವ್ಯಾಪಿ ಅಭಿಯಾನದ ಆರಂಭ ಮಾತ್ರ ಈ ಧ್ವಂಸ ಎಂದು ಓವೈಸಿ ಹೇಳಿದ್ದಾರೆ.
1970 ರಿಂದ ದಾಖಲೆಗಳು ಇದ್ದರೂ, ಮಧ್ಯರಾತ್ರಿ 1:30 ಕ್ಕೆ ಅವರು ವಕ್ಫ್ ಆಸ್ತಿಯನ್ನು ಧ್ವಂಸ ಮಾಡಿದರು. ಇದು ಸಂವಿಧಾನಬಾಹಿರ ವಕ್ಫ್ ಕಾಯ್ದೆಯ ಅನುಷ್ಠಾನವಾಗಿದೆ. ಸರ್ಕಾರ ನಮ್ಮ ಧಾರ್ಮಿಕವಾಗಿ ನಮ್ಮನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಲು ಬಯಸುತ್ತಾರೆ ಎಂದು ಅಸಾದುದ್ದೀನ್ ಓವೈಸಿ ಟೀಕಾಪ್ರಹಾರ ನೆಡೆಸಿದ್ದಾರೆ.

ಮಧ್ಯೆರಾತ್ರಿ ಸ್ಥಳದಲ್ಲಿ ಆಗಿದ್ದೇನು..?

ಮಂಗಳವಾರ ಮತ್ತು ಬುಧವಾರ ಮಧ್ಯರಾತ್ರಿ, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ರಾಮಲೀಲಾ ಮೈದಾನ ಪ್ರದೇಶದ ಫೈಜ್-ಎ-ಇಲಾಹಿ ಮಸೀದಿ ಬಳಿ ಅತಿಕ್ರಮಣ ವಿರೋಧಿ ಕಾರ್ಯಾಚರಣೆಯನ್ನು ನಡೆಸಿತು. ಅಲ್ಲದೆ, ಬುಲ್ಡೋಜರ್‌ಗಳು ಬೆಳಿಗ್ಗೆ 1:30 ರ ಸುಮಾರಿಗೆ ಮಸೀದಿಯ ಪಕ್ಕದಲ್ಲಿರುವ ಕಟ್ಟಡದ ಒಂದು ಭಾಗವನ್ನು ನೆಲಸಮಗೊಳಿಸಿದವು.
ಈ ವಿಚಾರವಾಗಿ ಮಸೀದಿಯನ್ನು ಕೆಡವಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಹೇಳುತ್ತಿದ್ದಂತೆ ಉದ್ವಿಗ್ನತೆ ತಕ್ಷಣವೇ ಭುಗಿಲೆದ್ದಿತು. ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಘರ್ಷಣೆಗಳು ನಡೆದಿದೆ. ಅಲ್ಲದೆ, ಕಲ್ಲು ತೂರಾಟದಲ್ಲಿ ಐವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಗುಂಪನ್ನು ಚದುರಿಸಲು ಅಧಿಕಾರಿಗಳು ಅಶ್ರುವಾಯು ಶೆಲ್‌ಗಳನ್ನು ಬಳಸಬೇಕಾಯಿತು.
ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು ಸಾರ್ವಜನಿಕ ಭೂಮಿಯಲ್ಲಿ ಅಕ್ರಮ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಆದೇಶದ ನಂತರ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net