

ಮುಂಬೈ: ಜಾಗತಿಕ ಮಾರುಕಟ್ಟೆಯ(Stock Market) ಸಕಾರಾತ್ಮಕ ಸಂಕೇತಗಳ ನಡುವೆ ಬುಧವಾರ (ಫೆಬ್ರವರಿ 18) ಭಾರತೀಯ ಷೇರು ಮಾರುಕಟ್ಟೆ ಚೇತರಿಕೆ ಕಂಡಿದೆ.ಹೂಡಿಕೆದಾರರು ಎಲ್ಲಾ ವಲಯಗಳಲ್ಲಿ ಆಸಕ್ತಿಯಿಂದ ಷೇರುಗಳನ್ನು ಖರೀದಿಸಿದ್ದರಿಂದ ಮಾರುಕಟ್ಟೆಯ ಪ್ರಮುಖಸೂಚ್ಯಂಕಗಳು ಏರಿಕೆ ದಾಖಲಿಸಿವೆ.
ಸೆನ್ಸೆಕ್ಸ್(Sensex): 283 ಅಂಕಗಳ(0.34%) ಏರಿಕೆಯೊಂದಿಗೆ 83,734.25 ಮಟ್ಟದಲ್ಲಿ ವಹಿವಾಟು ಮುಗಿಸಿದೆ.ನನಿಫ್ಟಿ 50(Nifty 50): 94 ಅಂಕಗಳ (0.37%) ಏರಿಕೆ ಕಂಡು 25,819.35 ಕ್ಕೆ ತಲುಪಿದೆ. ಮಾರುಕಟ್ಟೆಮೌಲ್ಯ: ಬಿಎಸ್‌ಇ (BSE) ಪಟ್ಟಿಯಲ್ಲಿರುವ ಕಂಪನಿಗಳ ಒಟ್ಟು ಮೌಲ್ಯ ₹470 ಲಕ್ಷ ಕೋಟಿಯಿಂದ ₹472ಲಕ್ಷ ಕೋಟಿಗೆ ಏರಿದೆ. ಅಂದರೆ, ಹೂಡಿಕೆದಾರರು ಒಂದೇ ದಿನದಲ್ಲಿ ಸುಮಾರು ₹2 ಲಕ್ಷ ಕೋಟಿಲಾಭ ಗಳಿಸಿದ್ದಾರೆ.
ಏರಿಕೆಗೆಪ್ರಮುಖ ಕಾರಣಗಳೇನು?
ತಜ್ಞರ ಪ್ರಕಾರ,ಬಜೆಟ್ ಮತ್ತು ಆರ್‌ಬಿಐ (RBI) ಪಾಲಿಸಿಗಳಂತಹ ಪ್ರಮುಖ ವಿದ್ಯಮಾನಗಳು ಮುಗಿದ ನಂತರ, ಈಗ ಮಾರುಕಟ್ಟೆಯುಆಯ್ದ ಷೇರುಗಳು ಮತ್ತು ವಲಯಗಳ ಆಧಾರದ ಮೇಲೆ ಚಲಿಸುತ್ತಿದೆ.
ಬ್ಯಾಂಕಿಂಗ್ಮತ್ತು ಹಣಕಾಸು: ಬ್ಯಾಂಕಿಂಗ್ವಲಯದ ಷೇರುಗಳು ಇಂದು ಸ್ಥಿರ ಪ್ರದರ್ಶನ ನೀಡಿವೆ.
ತ್ರೈಮಾಸಿಕಫಲಿತಾಂಶ: ತೃತೀಯ ತ್ರೈಮಾಸಿಕದ(Q3) ಫಲಿತಾಂಶಗಳು ನಿರೀಕ್ಷೆಯಂತೆಯೇ ಇರುವುದು ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಿದೆ.
ಕೊನೆಯ ಘಳಿಗೆಯಖರೀದಿ: ವಹಿವಾಟಿನ ಅಂತ್ಯದಲ್ಲಿಪ್ರಮುಖ ಕಂಪನಿಗಳ ಷೇರುಗಳ ಮೇಲೆ ನಡೆದ ಭಾರಿ ಖರೀದಿ ಮಾರುಕಟ್ಟೆ ಪುಟೇಳಲು ಕಾರಣವಾಯಿತು.
ಮಿಡ್‌ಕ್ಯಾಪ್ಮತ್ತು ಸ್ಮಾಲ್‌ಕ್ಯಾಪ್ ಜಿಗಿತ
ಕೇವಲ ದೊಡ್ಡಕಂಪನಿಗಳು ಮಾತ್ರವಲ್ಲದೆ, ಮಧ್ಯಮ ಮತ್ತು ಸಣ್ಣ ಗಾತ್ರದ ಕಂಪನಿಗಳ ಷೇರುಗಳಲ್ಲೂ ಖರೀದಿ ಕಂಡುಬಂದಿದೆ.ಬಿಎಸ್‌ಇ 150 ಮಿಡ್‌ಕ್ಯಾಪ್ ಸೂಚ್ಯಂಕವು ಶೇ. 0.50 ರಷ್ಟು ಮತ್ತು ಬಿಎಸ್‌ಇ 250 ಸ್ಮಾಲ್‌ಕ್ಯಾಪ್ಸೂಚ್ಯಂಕವು ಶೇ. 0.39 ರಷ್ಟು ಏರಿಕೆ ಕಂಡಿವೆ.
ಇಂದು ಲಾಭಗಳಿಸಿದ ಪ್ರಮುಖ ಷೇರುಗಳು
ನಿಫ್ಟಿ 50 ವಲಯದ50 ಷೇರುಗಳಲ್ಲಿ 31 ಷೇರುಗಳು ಲಾಭದೊಂದಿಗೆ ದಿನದ ವಹಿವಾಟು ಮುಗಿಸಿವೆ.
ಕ್ವಾಲಿಟಿವಾಲ್ಸ್ (Kwality Wall's):ಶೇ. 4.94 ಏರಿಕೆ
ಎಚ್‌ಡಿಎಫ್‌ಸಿಲೈಫ್ (HDFC Life): ಶೇ.3.37 ಏರಿಕೆ
ಟಾಟಾ ಸ್ಟೀಲ್(Tata Steel): ಶೇ.2.93 ಏರಿಕೆ
ಐಟಿಸಿ(ITC): ಶೇ. 2.15 ಏರಿಕೆ
ಬಜಾಜ್ ಆಟೋ(Bajaj Auto): ಶೇ.1.56 ಏರಿಕೆ,(ಏಜೆನ್ಸೀಸ್).