ಭಾನುವಾರ ಬಜೆಟ್ ಮಂಡನೆ : 1999 ರ ನಂತರ ಅಪರೂಪದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಸಂಸತ್ತು | Budget 2026

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
Published on
ನವದೆಹಲಿ: 2026-27 ನೇ ಹಣಕಾಸು ವರ್ಷದ ಕೇಂದ್ರ ಬಜೆಟ್(Budget 2026) ಅನ್ನು ಫೆಬ್ರವರಿ 1ರ ಭಾನುವಾರದಂದು ಮಂಡಿಸಲಾಗುವುದು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೋಮವಾರ (ಜ.12) ವೇಳಾಪಟ್ಟಿಯನ್ನು ದೃಢಪಡಿಸಿದ್ದಾರೆ. ಇದರೊಂದಿಗೆ ದಿನಾಂಕ ಬದಲಾವಣೆಯ ಬಗ್ಗೆ ವಾರಗಳ ಕಾಲ ಇದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಈ ಬಗ್ಗೆ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ (CCPA) ಶಾಸಕಾಂಗ ಕ್ಯಾಲೆಂಡರ್‌ಗೆ ಅನುಮೋದನೆ ನೀಡಿದ ನಂತರ ಈ ಪ್ರಕಟಣೆ ಹೊರಬಿದ್ದಿದೆ. ಅಲ್ಲದೆ, ಜನವರಿ 28 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವುದರೊಂದಿಗೆ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ.
ರಾಷ್ಟ್ರಪತಿಗಳ ಭಾಷಣದ ನಂತರ, ಭಾರತೀಯ ಆರ್ಥಿಕತೆಯ ಸ್ಥಿತಿಯನ್ನು ಪರಿಶೀಲಿಸುವ ಸರ್ಕಾರದ ಪ್ರಮುಖ ದಾಖಲೆಯಾದ ಆರ್ಥಿಕ ಸಮೀಕ್ಷೆಯನ್ನು ಜನವರಿ 29 ರಂದು ಮಂಡಿಸಲು ನಿರ್ಧರಿಸಲಾಗಿದೆ. ಈ ಪೂರ್ವಗಾಮಿ ನಿರ್ಧಾರವು ಮುಂಬರುವ ಹಣಕಾಸು ನೀತಿಗೆ ಆಧಾರವಾಗಿರುವ ಅಂಕಿಅಂಶಗಳ ಅಡಿಪಾಯ ಮತ್ತು ಬೆಳವಣಿಗೆಯ ಮುನ್ಸೂಚನೆಗಳನ್ನು ಒದಗಿಸುತ್ತದೆ.

ಎರಡು-ಹಂತದ ಅಧಿವೇಶನ

ವಿವಿಧ ಸ್ಥಾಯಿ ಸಮಿತಿಗಳಿಂದ ಬಜೆಟ್ ಹಂಚಿಕೆಗಳ ವಿವರವಾದ ಪರಿಶೀಲನೆಗೆ ಅನುವು ಮಾಡಿಕೊಡಲು, ಅಧಿವೇಶನವನ್ನು ಎರಡು ವಿಭಿನ್ನ ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲ ಹಂತ ಜನವರಿ 28 ರಂದು ಪ್ರಾರಂಭವಾಗಿ ಫೆಬ್ರವರಿ 13 ರಂದು ಮುಕ್ತಾಯಗೊಳ್ಳುತ್ತದೆ. ಎರೆಡನೇ ಹಂತ ಸಂಸತ್ತು ಮಾರ್ಚ್ 9 ರಂದು ಮತ್ತೆ ಸಭೆ ಸೇರಿ ಏಪ್ರಿಲ್ 2 ರಂದು ತನ್ನ ಕಲಾಪವನ್ನು ಮುಕ್ತಾಯಗೊಳಿಸಲಿದೆ.

ನಿರ್ಮಲಾ ಸೀತಾರಾಮನ್ ದಾಖಲೆಯ ಸಾಧನೆ

2026-27ನೇ ಸಾಲಿನ ಬಜೆಟ್ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಐತಿಹಾಸಿಕ ಮೈಲಿಗಲ್ಲು ಆಗಲಿದೆ. ಇದು ಅವರ ಸತತ ಒಂಬತ್ತನೇ ಬಜೆಟ್ ಮಂಡನೆಯಾಗಲಿದ್ದು, ಈ ಸಾಧನೆಯು ಪಿ. ಚಿದಂಬರಂ ಮತ್ತು ಪ್ರಣಬ್ ಮುಖರ್ಜಿರಂತಹ ಅನುಭವಿಗಳು ಮಾಡಿದ್ದಾರೆ. ಅದರೆ, ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ದೇಸಾಯಿ 10 ಬಜೆಟ್ ಮಂಡಿಸುವ ದಾಖಲೆಯನ್ನು ಹೊಂದಿದ್ದಾರೆ.
ಭಾರತೀಯ ಸಂಸದೀಯ ಇತಿಹಾಸದಲ್ಲಿ ಭಾನುವಾರದಂದು ಬಜೆಟ್ ಮಂಡಿಸುವುದು ಅಪರೂಪದ ಘಟನೆಯಾಗಿದ್ದು, ಕೊನೆಯ ಬಾರಿ 1999 ರ ಫೆಬ್ರವರಿ 1ರ ನಡೆದಿತ್ತು. ಅಲ್ಲದೆ, ಸರ್ಕಾರದ ಈ ನಿರ್ಧಾರವು, ಏಪ್ರಿಲ್ 1 ರಂದು ಹೊಸ ಹಣಕಾಸು ವರ್ಷದ ಆರಂಭದ ವೇಳೆಗೆ ಬಜೆಟ್ ಪ್ರಸ್ತಾವನೆಗಳನ್ನು ಅಂಗೀಕರಿಸಲಾಗಿದೆ ಮತ್ತು ಅನುಷ್ಠಾನಕ್ಕೆ ಸಿದ್ಧವಾಗಿದೆ ಎಂದು ಹೇಳಿದೆ.
ಮುಂಬರುವ ಬಜೆಟ್ ಭಾರತದ ದೃಢವಾದ ಜಿಡಿಪಿ ಬೆಳವಣಿಗೆಯನ್ನು ಕಾಯ್ದುಕೊಳ್ಳುವತ್ತ ಗಮನಹರಿಸುವ ನಿರೀಕ್ಷೆಯಿದೆ. ಇದು ಪ್ರಸ್ತುತ ಮುಂಗಡ ಅಂದಾಜು 7.4% ರಷ್ಟಿದೆ, ಅದೇ ಸಮಯದಲ್ಲಿ ಜಾಗತಿಕ ಆರ್ಥಿಕ ಅಡೆತಡೆಗಳು ಮತ್ತು ದೇಶೀಯ ಹಣಕಾಸಿನ ಆದ್ಯತೆಗಳನ್ನು ಪರಿಹರಿಸುತ್ತದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net