ಬಜೆಟ್ ನಂತರದ ಸಾಂಪ್ರದಾಯಿಕ ಪತ್ರಿಕಾಗೋಷ್ಠಿಯಲ್ಲಿ ಸಚಿವೆ ಸೀತಾರಾಮನ್ ಅವರು ವಿವಿಧ ವಲಯಗಳ ಹಂಚಿಕೆಗಳ ಬಗ್ಗೆ ವಿವರಿಸುತ್ತಿದ್ದರು. ಈ ವೇಳೆ ಪತ್ರಕರ್ತರೊಬ್ಬರು, ಮೇಡಂ, ಈ ಬಾರಿಯ ಬಜೆಟ್‌ನಲ್ಲಿ ದೇಶದ ಬೆನ್ನೆಲುಬಾದ ಮಧ್ಯಮ ವರ್ಗದವರಿಗೆ ನೀವು ನೀಡಿರುವ ನಿರ್ದಿಷ್ಟ ಕೊಡುಗೆ ಅಥವಾ ಸಮಾಧಾನಕರ ವಿಷಯವೇನು? ಎಂದು ಪ್ರಶ್ನಿಸಿದ್ದಾರೆ.