ನವದೆಹಲಿ: ಭಾರತದ ಕೃಷಿ ರಫ್ತು ಸಾಮರ್ಥ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 2026ರ ಬಜೆಟ್‌ನಲ್ಲಿ ಗೇರು (Cashew), ಕೋಕೋ (Cocoa) ಮತ್ತು ಶ್ರೀಗಂಧದ (Sandalwood) ಕೃಷಿಗೆ ಸಂಬಂಧಿಸಿದಂತೆ ಕ್ರಾಂತಿಕಾರಿ ಘೋಷಣೆಗಳನ್ನು ಮಾಡಿದ್ದಾರೆ. ಭಾರತದ ಪಾರಂಪರಿಕ ಬೆಳೆಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸುವ ಮೂಲಕ 2030ರ ವೇಳೆಗೆ ಇವುಗಳನ್ನು "ಪ್ರೀಮಿಯಂ ಗ್ಲೋಬಲ್ ಬ್ರ್ಯಾಂಡ್" ಮಾಡುವ ಗುರಿಯನ್ನು ಹೊಂದಲಾಗಿದೆ.