ನವದೆಹಲಿ: ಭಾರತದ ಆರ್ಥಿಕತೆಯ ಬೆನ್ನೆಲುಬಾಗಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ಬಲವರ್ಧನೆಗೆ ಒತ್ತು ನೀಡುವ ಸಲುವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕ್ರಾಂತಿಕಾರಿ ಕ್ರಮಗಳನ್ನು ಪ್ರಕಟಿಸಿದ್ದು, ದೇಶದ ಒಟ್ಟು ರಫ್ತಿನ ಶೇ. 45ರಷ್ಟು ಪಾಲನ್ನು ಹೊಂದಿರುವ ವಲಯವನ್ನು ಜಾಗತಿಕ ಮಟ್ಟದಲ್ಲಿ ಚಾಂಪಿಯನ್ ಆಗಿ ಪರಿವರ್ತಿಸುವುದು ಈ ಬಜೆಟ್‌ನ ಮುಖ್ಯ ಗುರಿಯಾಗಿದೆ.