ನಿಮಗೆಲ್ಲರಿಗೂ ಗೊತ್ತಿದೆ ಕಳೆದ ಬಾರಿ ಬಜೆಟ್ ಮಂಡನೆ ಮಾಡಿದಾಗ ಆದಾಯ ತೆರಿಗೆ ವಿನಾಯಿತಿಯನ್ನು 12 ಲಕ್ಷ ರೂ.ವರೆಗೂ ಹೆಚ್ಚಳ ಮಾಡಿ, ಜನರಿಗೆ ಬಿಗ್ ರಿಲೀಫ್ ನೀಡಿದರು. ಇದಾದ ಬಳಿಕ, ಅಂದರೆ ದೀಪಾವಳಿ ಹಬ್ಬದ ಉಡುಗೊರೆಯಾಗಿ ಜಿಎಸ್ಟಿ ದರಗಳನ್ನು ಕಡಿತಗೊಳಿಸಿದರು. 4 ಸ್ಲ್ಯಾಬ್ ಹೊಂದಿದ್ದ ಜಿಎಸ್ಟಿ ಪಟ್ಟಿಯನ್ನು ಕೇವಲ 2ಕ್ಕೆ ಸೀಮಿತ ಮಾಡಿ, ಜನರಿಗೆ ಭಾರಿ ರಿಲೀಫ್ ನೀಡಿದರು. ಆದರೂ, ಜನರಲ್ಲಿ ಕೆಲವೊಂದಿಷ್ಟು ನಿರೀಕ್ಷೆಗಳಿವೆ. ಅದರಲ್ಲೂ ಸ್ಟ್ಯಾಂಡರ್ಡ್ ಡಿಡಕ್ಷನ್ನಲ್ಲಿ ಕೆಲವೊಂದಿಷ್ಟು ರಿಲೀಫ್ ದೊರೆಯಬಹುದು ಅನ್ನೋ ನಿರೀಕ್ಷೆಯಲ್ಲಿ ಜನರಿದ್ದಾರೆ. ಹೀಗಾಗಿ. ಫೆ.1ರಂದು ಮಂಡನೆಯಾಗುವ ಬಜೆಟ್ ಮೇಲೆ ಎಲ್ಲರ ಗಮನ ಇದೆ.