ಮಾಯಾವತಿ ಸುದ್ದಿಗೋಷ್ಠಿಯಲ್ಲಿ ಶಾರ್ಟ್ ಸರ್ಕ್ಯೂಟ್! ಹೊಗೆ ಬರುತ್ತಿದ್ದಂತೆ ಗಾಬರಿಗೊಂಡ ಮುಖಂಡರು.. mayawati

mayawati
mayawati
Published on
ಲಕ್ನೋ: ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಧಿನಾಯಕಿ ಮಾಯಾವತಿ ( mayawati ) ಅವರ 70ನೇ ಜನ್ಮದಿನದ ಹಿನ್ನೆಲೆ ಲಕ್ನೋದಲ್ಲಿ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ, ವಿದ್ಯುತ್ ಸರ್ಕ್ಯೂಟ್ ಉಂಟಾಗಿ ಸಣ್ಣ ಮಟ್ಟದ ಆತಂಕ ಸೃಷ್ಟಿಯಾಯಿತು.

ನಡೆದಿದ್ದೇನು?

ಮಾಯಾವತಿ ಅವರು ತಮ್ಮ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಸಭಾಂಗಣದ ಎಲೆಕ್ಟ್ರಿಕ್ ಬೋರ್ಡ್‌ವೊಂದರಲ್ಲಿ ಇದ್ದಕ್ಕಿದ್ದಂತೆ ಕಿಡಿ ಕಾಣಿಸಿಕೊಂಡಿತು. ಕೂಡಲೇ ಹೊಗೆ ಬರಲಾರಂಭಿಸಿತು.ಇದರಿಂದ ಸಭೆಯಲ್ಲಿದ್ದ ಮುಖಂಡರು ಮತ್ತು ಮಾಧ್ಯಮದವರು ಒಂದು ಕ್ಷಣ ಗಾಬರಿಗೊಂಡರು.
ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಮತ್ತು ಎಲೆಕ್ಟ್ರಿಷಿಯನ್‌ಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಇದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅಗ್ನಿ ಅವಘಡವೊಂದು ತಪ್ಪಿದಂತಾಗಿದೆ.
"ಇದು ಭದ್ರತೆಯಲ್ಲಿನ ಲೋಪವಾಗಿದೆ. ನನ್ನ ಪ್ರಾಣಕ್ಕೆ ಅಪಾಯವಿರುವ ಇಂತಹ ಘಟನೆಗಳು ನಡೆಯಬಾರದು" ಎಂದು ಸರ್ಕಾರ ಮತ್ತು ಅಧಿಕಾರಿಗಳನ್ನು ಉದ್ದೇಶಿಸಿ ಹೇಳಿದರು. ನಂತರ ವಿದ್ಯುತ್ ವ್ಯವಸ್ಥೆ ಸರಿಯಾದ ಬಳಿಕ ಅವರು ತಮ್ಮ ಭಾಷಣವನ್ನು ಮುಂದುವರಿಸಿದರು.
ಜನ್ಮದಿನದ ಈ ಶುಭ ಸಂದರ್ಭದಲ್ಲಿ ಅವರು ಮುಂಬರುವ ಚುನಾವಣೆಗಳ ಬಗ್ಗೆ ಮಾತನಾಡಿದರು. ಈ ಬಾರಿ ಬಿಎಸ್ಪಿ ಯಾವುದೇ ದೊಡ್ಡ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಅವರು ಪುನರುಚ್ಚರಿಸಿದರು. ಅಲ್ಲದೆ, ಕಾರ್ಯಕರ್ತರು ಸಂಘಟಿತರಾಗಿ ಕೆಲಸ ಮಾಡುವಂತೆ ಕರೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net