ಕೇವಲ ಉಡುಪು ಮಾತ್ರವಲ್ಲದೆ, ಪ್ರತಿಭಟನೆಯ ತೀವ್ರತೆ ಹೆಚ್ಚಿಸಲು ಸುಧೀರ್ ರೆಡ್ಡಿ ಅವರು ತಮ್ಮೊಂದಿಗೆ 'ಫಾಗಿಂಗ್ ಮೆಷಿನ್' (ಹೊಗೆ ಹಾಕುವ ಯಂತ್ರ) ಮತ್ತು ಸೊಳ್ಳೆ ಪರದೆಗಳನ್ನು ಅಸೆಂಬ್ಲಿ ಮೀಡಿಯಾ ಹಾಲ್‌ಗೆ ತರಲು ಯತ್ನಿಸಿದರು. ಆದರೆ, ಅನುಮತಿ ಇಲ್ಲದ ಕಾರಣ ಅಸೆಂಬ್ಲಿ ಮಾರ್ಷಲ್‌ಗಳು ಉಪಕರಣಗಳನ್ನು ವಶಪಡಿಸಿಕೊಂಡರು. ಇದರಿಂದ ಕೆಂಡಾಮಂಡಲವಾದ ಶಾಸಕರು, ಮಾರ್ಷಲ್‌ಗಳ ತಡೆಯ ನಡುವೆಯೂ ಅದೇ ಉಡುಪಿನಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸಿದರು.