ಕೃತಿ ಸನೋನ್ ಬಟ್ಟೆ ವಿವಾದಕ್ಕೆ ರಾಹುಲ್ ಎಂಟ್ರಿ: ಬ್ರೋ ಅಂತಾನೇ ಕ್ಲಾಸ್ ತಗೊಂಡ ಕಂಗನಾ ರಣಾವತ್! | Kangana Ranaut

 Kangana Ranaut |  ಕೃತಿ ಸನೋನ್ ಬಟ್ಟೆ ವಿವಾದಕ್ಕೆ ರಾಹುಲ್ ಎಂಟ್ರಿ
Kangana Ranaut | ಕೃತಿ ಸನೋನ್ ಬಟ್ಟೆ ವಿವಾದಕ್ಕೆ ರಾಹುಲ್ ಎಂಟ್ರಿ
Published on

ನಟಿ ಕೃತಿ ಸನೋನ್ ಅವರ ರಾಖಿ ಜಾಹೀರಾತಿನ ಉಡುಪಿನ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುರುಷಪ್ರಭುತ್ವವನ್ನು ನಿರ್ಮೂಲನೆ ಮಾಡಿ ಎಂದು ಹೇಳಿದ್ದರು. ಇದಕ್ಕೆ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ (Kangana Ranaut) ತೀವ್ರ ತಿರುಗೇಟು ನೀಡಿದ್ದು, ಇಬ್ಬರ ನಡುವೆ ರಾಜಕೀಯ ವಾಕ್ಸಮರ ಶುರುವಾಗಿದೆ.

ರಾಹುಲ್ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಬಿಜೆಪಿ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಒಂದನ್ನು ಕಂಗನಾ ರಣಾವತ್ ಮರುಹಂಚಿಕೊಂಡಿದ್ದಾರೆ. ಅದಕ್ಕೆ ಶೀರ್ಷಿಕೆಯಾಗಿ ಬ್ರೋ, ತಡಿ. ಭಾರತ್ ಮಾತಾ ಕಿ ಜೈ. ಶುರು ಮಾಡೋಣ ಎಂದು ಬರೆಯುವ ಮೂಲಕ ರಾಹುಲ್​ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿ ಹಂಚಿಕೊಂಡಿದ್ದ ಪೋಸ್ಟ್‌ನಲ್ಲಿ ಮಹಿಳಾ ಪ್ರಾತಿನಿಧ್ಯ ಮತ್ತು ಇತರ ಪ್ರಮುಖ ವಿಷಯಗಳ ಕುರಿತು ಕಾಂಗ್ರೆಸ್ ಪಕ್ಷದ ನಿಲುವನ್ನು ಪ್ರಶ್ನಿಸಲಾಗಿತ್ತು. ತ್ರಿಪಲ್ ತಲಾಕ್, ಮಹಿಳಾ ಮೀಸಲಾತಿ ವಿಧೇಯಕ, ಶಹಾ ಬಾನೋ ಪ್ರಕರಣ ಮತ್ತು ರಾಜ್ಯದ ಸಂಪುಟದಲ್ಲಿ ಮಹಿಳಾ ಸಚಿವರ ಕೊರತೆ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ರಾಹುಲ್ ಗಾಂಧಿ ಅವರ ನಿಲುವನ್ನು ಟೀಕಿಸಲಾಗಿತ್ತು.
ಅದರ ಮೊದಲ ಚಿತ್ರದಲ್ಲಿ ರಾಹುಲ್ ಗಾಂಧಿ ಪುರುಷಪ್ರಭುತ್ವವನ್ನು ನಿರ್ಮೂಲನೆ ಮಾಡಿ! ಎಂದರೆ, ಮಹಿಳೆಯೊಬ್ಬಳು ಬ್ರೋ, ತಡಿ. ಭಾರತ್ ಮಾತಾ ಕಿ ಜೈ. ಶುರು ಮಾಡೋಣ ಎನ್ನುತ್ತಾಳೆ. ನಂತರ ತ್ರಿಪಲ್ ತಲಾಕ್ ಬಗ್ಗೆ ಕೇಳಿದಾಗ, ರಾಹುಲ್ ಅದು ಸಂಪೂರ್ಣ ವೋಟ್ ಬ್ಯಾಂಕ್ ರಾಜಕೀಯವಾಗಿತ್ತು, ಆದರೂ ಪುರುಷಪ್ರಭುತ್ವವನ್ನು ನಿರ್ಮೂಲನೆ ಮಾಡಿ! ಎನ್ನುತ್ತಾರೆ. ಕಾಂಗ್ರೆಸ್ ಮಹಿಳಾ ಮೀಸಲಾತಿ ಮಸೂದೆಯ ವಿರುದ್ಧ ಮತ ಚಲಾಯಿಸಿದ್ದನ್ನು ಎತ್ತಿಹಿಡಿದಾಗಲೂ ಅದು ವೋಟ್ ಬ್ಯಾಂಕ್ ಆಟ ಎಂದು ರಾಹುಲ್ ಉತ್ತರಿಸುವಂತೆ ತೋರಿಸಲಾಗಿದೆ. ಶಹಾ ಬಾನೋ ಪ್ರಕರಣ ಮತ್ತು ರಾಜ್ಯದ ಸಂಪುಟದಲ್ಲಿ 33 ಮಂತ್ರಿಗಳಿದ್ದರೂ ಒಬ್ಬೇ ಒಬ್ಬ ಮಹಿಳೆ ಇಲ್ಲ ಏಕೆ..? ಎಂದು ಪ್ರಶ್ನಿಸಿದಾಗ ರಾಹುಲ್ ಗಾಂಧಿ ಉತ್ತರಿಸಲಾಗದೆ ತಡವರಿಸುವಂತೆ ಚಿತ್ರಿಸಲಾಗಿದೆ.

ಬೆಂಬಲ

ನೀಡಿದ್ದ

ರಾಹುಲ್ ಗಾಂಧಿ!...

ಆಭರಣ ಸಂಸ್ಥೆಯೊಂದರ 36 ಸೆಕೆಂಡುಗಳ ರಕ್ಷಾಬಂಧನದ ಜಾಹೀರಾತಿನಲ್ಲಿ ಕೃತಿ ಸನೋನ್ ಧರಿಸಿದ್ದ ಉಡುಪಿನ ಕುರಿತು ಎದ್ದಿದ್ದ ಟೀಕೆಗಳನ್ನು ಮಂಗಳವಾರ ಸಮರ್ಥಿಸಿಕೊಂಡು ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದರು. ಮಹಿಳೆ ಏನು ಧರಿಸಬೇಕು, ಏನು ಮಾಡಬೇಕು ಮತ್ತು ಎಲ್ಲಿಗೆ ಹೋಗಬೇಕು ಎಂಬುದು ಆಕೆಯ ಆಯ್ಕೆ. ಮಹಿಳೆಯರು ತಮ್ಮ ಸ್ವಾತಂತ್ರ್ಯವನ್ನು ಚಲಾಯಿಸುವುದಕ್ಕಾಗಿ ಅವರ ಮೇಲೆ ಟ್ರೋಲ್ ಮಾಡುವುದನ್ನು ನಿಲ್ಲಿಸಿ ಎಂದು ಬರೆದು #SmashThePatriarchy ಹ್ಯಾಶ್‌ಟ್ಯಾಗ್ ಬಳಸಿದ್ದರು.

ವಿವಾದಕ್ಕೆ ಕಾರಣವಾದ ರಾಖಿ ಜಾಹೀರಾತು

ಆಭರಣ ಬ್ರ್ಯಾಂಡ್‌ನ ಜಾಹೀರಾತಿನಲ್ಲಿ ಕೃತಿ ಸನೋನ್ ಅವರು ಇಂಡೋ-ವೆಸ್ಟರ್ನ್ ಉಡುಪು ಧರಿಸಿ ತಮ್ಮ ಸಹೋದರ ಮತ್ತು ಸಾಕು ನಾಯಿಗೆ ರಾಖಿ ಕಟ್ಟುವುದನ್ನು ತೋರಿಸಲಾಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಆಯ್ಕೆಯ ಸ್ವಾತಂತ್ರ್ಯ ಮತ್ತು ಭಾರತೀಯ ಸಂಸ್ಕೃತಿಯ ಕುರಿತು ಭಾರಿ ಚರ್ಚೆಯನ್ನು ಹುಟ್ಟುಹಾಕಿತ್ತು. ಇದಕ್ಕೂ ಮುನ್ನ ಕಂಗನಾ ರಣಾವತ್ ಸಹ ಕೃತಿ ಅವರ ಉಡುಪನ್ನು ವಿಮರ್ಶಿಸಿ, ನಮ್ಮ ವಾರ್ಡ್‌ರೋಬ್‌ಗಳಲ್ಲಿ ವಿವಿಧ ರೀತಿಯ ಬಟ್ಟೆಗಳಿರುವಾಗ ಸಹೋದರನಿಗೆ ಬಿಕಿನಿ ಅಥವಾ ಒಳ ಉಡುಪಿನಲ್ಲಿ ರಾಖಿ ಕಟ್ಟಲು ಏಕೆ ಬಯಸುತ್ತೀರಿ..? ಈ ಜಾಹೀರಾತು ಅಸಹ್ಯಕರವಾಗಿ ಕಾಣುತ್ತಿದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.

ಕೃತಿ ಸನೋನ್ ನೀಡಿದ ಸ್ಪಷ್ಟನೆ

ಇತ್ತೀಚೆಗೆ ರಾಹುಲ್ ಗಾಂಧಿ ಅವರು ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸುವಾಗ ಮನುಸ್ಮೃತಿ ಮನಸ್ಥಿತಿಯನ್ನು ಟೀಕಿಸಿ, ಮಹಿಳೆಯರು ತಂದೆ, ಪತಿ ಅಥವಾ ಮಗನಿಗೆ ಸೇರಿದವರಲ್ಲ, ಅವರು ತಮಗೆ ತಾವೇ ಒಡೆಯರು ಎಂದು ಹೇಳಿ ಪುರುಷಪ್ರಭುತ್ವ ನಿರ್ಮೂಲನೆಗೆ ಕರೆ ನೀಡಿದ್ದರು. ಇದರ ಬೆನ್ನಲ್ಲೇ ಕಂಗನಾ ರಣಾವತ್ ಕಾಂಗ್ರೆಸ್‌ನ ಹಳೆಯ ದಾಖಲೆಗಳನ್ನು ಎತ್ತಿಹಿಡಿದು ರಾಹುಲ್​ಗೆ ತಿರುಗೇಟು ನೀಡಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net