

ದೆಹಲಿ ಮೆಟ್ರೋ ಬಗ್ಗೆ ಹಾಡಿ ಹೊಗಳಿದ ಬ್ರಿಟನ್ ಪ್ರಜೆ.
ಸ್ವಚ್ಛವಾದ ಮೆಟ್ರೋ ನಿಲ್ದಾಣಗಳು, ಆಧುನಿಕ ಸೌಲಭ್ಯ ಹಾಗೂ ಕಡಿಮೆ ದರದ ಬಗ್ಗೆ ಉಲ್ಲೇಖಿಸಿದ್ದಾರೆ.
ಲಂಡನ್ಗಿಂದ ಪ್ರಯಾಣದ ದರ ಕಡಿಮೆ ಇದೆ ಎಂದು ವಿಡಿಯೋ ಹಂಚಿಕೊಂಡ ಜ್ಯಾಕ್.
British Traveller on Metro: ಬ್ರಿಟನ್ ಪ್ರಜೆಯೊಬ್ಬರು ಭಾರತದ ಮೆಟ್ರೋ ದರ ಹಾಗೂ ಸ್ವಚ್ಛತೆ ಬಗ್ಗೆ ಕೊಂಡಾಡಿದ್ದಾರೆ. ದೆಹಲಿಯ ಸುರಂಗ ಮಾರ್ಗದ ಮೆಟ್ರೋದಲ್ಲಿ ಪ್ರಯಾಣಿಸಿದ ಅವರು, ಸ್ವಚ್ಛವಾದ ಮೆಟ್ರೋ ನಿಲ್ದಾಣಗಳು, ಆಧುನಿಕ ಸೌಲಭ್ಯ ಹಾಗೂ ಕಡಿಮೆ ದರದ ಮೆಟ್ರೋ ಪ್ರಯಾಣದ ಬಗ್ಗೆ ಕೊಂಡಾಡಿದ್ದಾರೆ.
ಟ್ರಾವೆಲರ್ Jack Heaton ಎಂಬ ಬ್ರಿಟನ್ ಪ್ರಜೆ ಹಂಚಿಕೊಂಡಿರುವ ಇನ್ಸ್ಟಾಗ್ರಾಮ್ ವಿಡಿಯೋ ಪ್ರಕಾರ, ಮೊದಲ ಬಾರಿ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದೆ. ನಾನು ಮೆಟ್ರೋ ಹತ್ತಿದ ಮೊದಲ ದಿನವೇ ದಿನವೇ ಪ್ರತಿಭಟನೆಗಳು ನಡೆದಿದ್ದವು. ಆದರೂ ದೆಹಲಿ ಮೆಟ್ರೋ ಒಂದು ವಿಶಾಲವಾದ ಮೆಟ್ರೋ ವ್ಯವಸ್ಥೆ. ಸ್ವಚ್ಛವಾಗಿತ್ತು. ಲಂಡನ್ಗಿಂತಲೂ ಆಧುನಿಕವಾಗಿದೆ. ಎಲ್ಲ ತಾಂತ್ರಿಕ ಸುಧಾರಣೆಗಳು ಇಲ್ಲಿವೆ ಎಂದು ಕೊಂಡಾಡಿದ್ದಾರೆ.
ಇಲ್ಲಿನ ಸೌಲಭ್ಯಕ್ಕಿಂತ ಜ್ಯಾಕ್ ಮಾರು ಹೋಗಿದ್ದು, ಇಲ್ಲಿನ ಬಜೆಟ್ ಫ್ರೆಂಡ್ಲಿ ಓಡಾಟಕ್ಕೆ. ಈ ಬಗ್ಗೆ ಅವರು ಹೇಳಿದ್ದು ಹೀಗೆ, ಲಂಡನ್ಗಿಂತಲೂ ಇಲ್ಲಿ ಕಡಿಮೆ ದರಕ್ಕೆ ಪ್ರಯಾಣಿಸಬಹುದು. ಇಲ್ಲಿನ ಮೆಟ್ರೋ ಪ್ರಯಾಣ ದರವು ಕಡಿಮೆ ಇರುತ್ತದೆ. ನಾನು ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿ ಕೇವಲ ಮೂವತ್ತೊಂದು ರೂಪಾಯಿ ಪಾವತಿ ಮಾಡಿದ್ದೇನೆ ಎಂದು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಭಾರತದ ಉತ್ತಮವಾದ ಮುಖವನ್ನು ಜಗತ್ತಿಗೆ ತೋರಿಸಿದ್ದಕ್ಕೆ ಧನ್ಯವಾದಗಳು. ಇಲ್ಲಿ ನಿಮ್ಮ ಸಮಯ ಚೆನ್ನಾಗಿರಲಿ ಎಂದು ಹಾರೈಸಿದ್ದಾರೆ. ಮತ್ತೊಬ್ಬರು, ವರ್ಷಗಳಿಂದ ದೆಹಲಿ ಮೆಟ್ರೋ ಸೇವೆಯನ್ನು ಬಳಸುತ್ತಿದ್ದೇನೆ. ನಿಜಕ್ಕೂ ಇಲ್ಲಿನ ಪ್ರಯಾಣ, ದರ ಎಲ್ಲವೂ ಅತ್ಯುತ್ತಮ ಎಂದಿದ್ದಾರೆ. ದೆಹಲಿ ಮೆಟ್ರೋ ವಿಶ್ವಾಸಾರ್ಹತೆಯಲ್ಲಿ ವಿಶ್ವದ ಟಾಪ್ ಐದು ಮೆಟ್ರೋಗಳಲ್ಲಿ ಒಂದಾಗಿದೆ ಎಂದು ಮತ್ತೊಬ್ಬರು ತಿಳಿಸಿದ್ದಾರೆ. ಇನ್ನೂ ಕೆಲವರು ಮುಂಬೈ ಮೆಟ್ರೋದಲ್ಲಿ ಪ್ರಯಾಣಿಸಿ ಎಂದು ಸಲಹೆ ಕೊಟ್ಟಿದ್ದಾರೆ.
ದೆಹಲಿಯು ಭಾರತದ ಅತಿ ದೊಡ್ಡ ಮೆಟ್ರೋ ನೆಟ್‌ವರ್ಕ್‌ಗಳಲ್ಲಿ ಒಂದು. ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (DMRC) ರೆಡ್, ಎಲ್ಲೋ, ಬ್ಲೂ, ಗ್ರೀನ್, ವಯೋಲೆಟ್, ಪಿಂಕ್, ಮೆಜೆಂಟಾ ಮತ್ತು ಗ್ರೇ ಲೈನ್‌ಗಳು ಸೇರಿದಂತೆ ಒಟ್ಟು 9 ಮುಖ್ಯ ಮೆಟ್ರೋ ಮಾರ್ಗಗಳನ್ನು ನಿರ್ವಹಿಸುತ್ತದೆ. ಈ ಎಲ್ಲ ಮಾರ್ಗಗಳು ಒಟ್ಟಾಗಿ 374.46 ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದು, 271 ನಿಲ್ದಾಣಗಳನ್ನು ಒಳಗೊಂಡಿವೆ, (ಏಜೆನ್ಸೀಸ್).