ಮದುವೆಗೆ ಬಂದ ಅತಿಥಿಯ ಜೀವ ಉಳಿಸಿದ ವಧು! ವೈರಲ್​ ವಿಡಿಯೋ ಇಲ್ಲಿದೆ ನೋಡಿ...

ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡುತ್ತಿರುವ ವಧು
ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡುತ್ತಿರುವ ವಧು
Published on
ತೆಲಂಗಾಣ: ಮದುವೆ ಸಮಾರಂಭದಲ್ಲಿ ಹೃದಯಾಘಾತವಾದ ಮಹಿಳೆಯನ್ನು ವಧು(ಯುವತಿ) ಬದುಕಿಸಿದ ಘಟನೆ ತೆಲಂಗಾಣದ ನಾಗರ ಕರ್ನೂಲ್​​ ಜಿಲ್ಲೆಯ ಕೊಲ್ಲಪುರದಲ್ಲಿ ನಡೆದಿದೆ. ಅಲ್ಲದೆ, ಈ ಘಟನೆಗೆ ಸಂಬಂಧಿಸಿಂತೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.
ಕೊಲ್ಲಪುರದ ಬಂಡಿವಾಡೆಯಲ್ಲಿ ಮದುವೆ ಸಮಾರಂಭಕ್ಕೆ ಬಂದಿದ್ದ ಅತಿಥಿ ಮಹಿಳೆಯೊಬ್ಬರು ಏಕಾಏಕಿ ತಲೆ ಸುತ್ತು ಬಂದು ನೆಲಕ್ಕೆ ಉರುಳಿದ್ದಾರೆ. ಇದನ್ನೂ ತಕ್ಷಣ ಗಮನಿಸಿದ ವಧು(ವೃತ್ತಿ ಜೀವನದಲ್ಲಿ ವೈದ್ಯೆ) ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಬದುಕುಳಿಸಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಾಗಿದ್ದು, ಲಘು ಹೃದಯಘಾತವಾಗಿದೆ ಎಂದು ಹೇಳಲಾಗಿದೆ.
ಇನ್ನು ವಧುವಿನ ಸಕಾಲಿಕ ಪ್ರತಿಕ್ರಿಯೆಯಿಂದ ಮಹಿಳೆಯ ಜೀವ ಉಳಿದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ವಧುವಿನ ಕೆಲಸಕ್ಕೆ ನೆಟ್ಟಿಗರು ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ಪ್ರಸ್ತುತ ಯುಗದಲ್ಲಿ ಹೃದಯಾಘಾತದ ಸುದ್ದಿಗಳು ಹೃದಯ ವಿದ್ರಾವಕವಾಗಿವೆ. ವಯಸ್ಸಿನ ಹೊರತಾಗಿಯೂ, ಅನೇಕ ಮಕ್ಕಳು ಮತ್ತು ವಯಸ್ಕರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಪುರುಷರು ಮತ್ತು ಮಹಿಳೆಯರು ಎಂಬ ಬೇಧವಿಲ್ಲದೆ ಜನರು ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸರಿಯಾದ ಸಮಯದಲ್ಲಿ ವೈದ್ಯಕೀಯ ಸಹಾಯ ಸಿಗದ ಕಾರಣ ಪ್ರಾಣ ಕಳೆದುಕೊಂಡವರೂ ಇದ್ದಾರೆ. ಈ ಸಂದರ್ಭದಲ್ಲಿ ಈ ಘಟನೆ ಎಲ್ಲರ ಮನ ಗೆದಿದ್ದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net