ಈ ಹಿನ್ನೆಲೆ ಸೋಮವಾರ ಮತ್ತೆ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯವು, ಆರೋಪಪಟ್ಟಿಗಳನ್ನು ವಜಾಗೊಳಿಸುವಂತೆ ಕೋರಿ ನ್ಯಾಯಾಂಗ ಇಲಾಖೆಯು ಸಲ್ಲಿಸಿದ್ದ ರೂಲ್ 48(ಎ) ಅರ್ಜಿಯನ್ನು ಪುರಸ್ಕರಿಸಿದ ನ್ಯಾ. ನಿಕೋಲಸ್ ಗಾರೌಫಿಸ್, ಸರ್ಕಾರವು ಈ ಪ್ರಕರಣವನ್ನು ಕೈಬಿಡಲು ನಿರ್ಧರಿಸಿದ್ದೇಕೆ? ಎಂಬುದರ ಕುರಿತು ಪ್ರಾಸಿಕ್ಯೂಟರ್‌ಗಳಿಂದ ಹೆಚ್ಚಿನ ವಿವರಣೆಗಳನ್ನು ಪಡೆದ ಬಳಿಕ ಮೊಕದ್ದಮೆಯನ್ನು ಶಾಶ್ವತವಾಗಿ ವಜಾಗೊಳಿಸಲು ಅನುಮೋದಿಸಿದರು.