2021ರಿಂದ 2025ರ ನಡುವೆ ಆರ್ಬಿಐ 185 ಟನ್ ಚಿನ್ನವನ್ನು ಖರೀದಿಸಿದೆ. ಕಳೆದ 10 ವರ್ಷಗಳಲ್ಲಿ ಚಿನ್ನದ ಸಂಗ್ರಹವು 560 ಟನ್ಗಳಿಂದ 880.52 ಟನ್ಗಳಿಗೆ ಏರಿಕೆಯಾಗಿದೆ, ಅಂದರೆ ಶೇಕಡ 57ರಷ್ಟು ಹೆಚ್ಚಳವಾಗಿದೆ. ಪ್ರಸ್ತುತ ಭಾರತದ ಒಟ್ಟು ವಿದೇಶಿ ವಿನಿಮಯ ಮೀಸಲಿನಲ್ಲಿ ಚಿನ್ನದ ಪಾಲು ಶೇ.15.3ರಷ್ಟಿದ್ದು, ಇದು ಕಳೆದ ವರ್ಷಕ್ಕಿಂತ ಶೇ.5ರಷ್ಟು ಹೆಚ್ಚಾಗಿದೆ. ಭಾರತ ಮಾತ್ರ ಚಿನ್ನ ಖರೀದಿಸುತ್ತಿದೆ ಎಂದಲ್ಲ, ಬದಲಾಗಿ ಚೀನಾ, ಬ್ರೆಜಿಲ್, ಟರ್ಕಿ, ಪೋಲೆಂಡ್ನಂತಹ ಹಲವು ದೇಶಗಳ ಕೇಂದ್ರೀಯ ಬ್ಯಾಂಕ್ಗಳು ತಮ್ಮ ಚಿನ್ನದ ಸಂಗ್ರಹವನ್ನು ಹೆಚ್ಚಿಸಿಕೊಳ್ಳುತ್ತಿವೆ.