ಸಾಹಿಬಾಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯ 'ಪಿಂಕ್ ಬೂತ್' (Pink Booth) ಉಸ್ತುವಾರಿಯಾಗಿದ್ದ ಭುವನೇಶ್ವರಿ ಸಿಂಗ್, ವರದಕ್ಷಿಣೆ ಕಿರುಕುಳದ ಪ್ರಕರಣವೊಂದರಲ್ಲಿ ಆರೋಪಿಗಳ ಹೆಸರು ಕೈಬಿಡಲು 45,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ದೂರುದಾರರಾದ ರಾಂಪಾಲ್ ಸೈನಿ ಅವರು ಮೀರತ್‌ನ ಭ್ರಷ್ಟಾಚಾರ ನಿರೋಧಕ ದಳಕ್ಕೆ (Anti-Corruption Squad) ದೂರು ನೀಡಿದ್ದರು.