ವೆನೆಜುವೆಲಾದಲ್ಲಿ ನಾವಿಕನ ನಿಗೂಢ ಸಾವು; ಭಾರತಕ್ಕೆ ತಂದ ಮೃತದೇಹದಲ್ಲಿ ಮೆದುಳು, ಹೃದಯ, ಶ್ವಾಸಕೋಶವೇ ನಾಪತ್ತೆ!..Venezuela

 Indian sailor dead in Venezuela organs missing
Indian sailor dead in Venezuela organs missing
Published on

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ಅಮೆರಿಕದ ವೆನೆಜುವೆಲಾದಲ್ಲಿ ರಾಕೇಶ್​ ಚೌಹಾಣ್​ ಮೃತಪಟ್ಟ ಕೇಸ್​​
  • ವೆನೆಜುವೆಲಾದಿಂದ ಭಾರತಕ್ಕೆ ಬಂದ ಮೃತದೇಹದಲ್ಲಿ ಹೃದಯ, ಮೆದುಳು ಮಾಯಾ
  • ಮರಣೋತ್ತರೆ ಪರೀಕ್ಷೆ ಬಗ್ಗೆ ವರದಿ ರವಾನಿಸಸ ಬಗ್ಗೆ ಹೆಚ್ಚಾದ ಆತಂಕ
ನವದೆಹಲಿ: ಮೇನಲ್ಲಿ ದಕ್ಷಿಣ ಅಮೆರಿಕದ ವೆನೆಜುವೆಲಾದಲ್ಲಿ ಉತ್ತರ ಪ್ರದೇಶದ 33 ವರ್ಷದ ರಾಕೇಶ್​​ ಚೌಹಾಣ್​ ಮೃತಪಟ್ಟಿದ್ದಾರೆ ಎನ್ನಲಾಗಿತ್ತು. ರಾಕೇಶ್​ ಅವರ ಮೃತದೇಹವನ್ನು ಉತ್ತರ ಪ್ರದೇಶದಲ್ಲಿ ಮರು ಮರಣೋತ್ತರಕ್ಕೆ ಒಳಪಡಿಸಿದಾಗ ಬೆಳಕಿಗೆ ಬಂದ ವಿಚಾರಗಳು ಸದ್ಯ ಆ ವೈದ್ಯರನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ.
ಉತ್ತರ ಪ್ರದೇಶದ ಡಿಯೋರಿಯಾ ನಿವಾಸಿಯಾದ 33 ವರ್ಷದ ರಾಕೇಶ್​​ ಚೌಹಾಣ್​ 2025ರಲ್ಲಿ ಎಕ್ಸ್​​ಫಿನಿಟಿ ಕಂಪನಿ ಮೂಲಕ ವೆನೆಜುವೆಲಾಗೆ ಹಡಗಿನಲ್ಲಿ ಕೆಲಸಕ್ಕೆ ತೆರಳಿದ್ದರು. ಮೇನಲ್ಲಿ ಅವರು ಮೃತಪಟ್ಟಿದ್ದರು. ಭಾರತಕ್ಕೆ ತಡವಾಗಿ ಮೃತದೇಹ ರವಾನಿಸಿದರೂ ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡಿಲ್ಲ. ಉತ್ತರ ಪ್ರದೇಶದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದಾಗ, ರಾಕೇಶ್​ ಅವರ ದೇಹದಲ್ಲಿ ಮೆದುಳು, ಹೃದಯ ಹಾಗೂ ಶ್ವಾಸಕೋಶ ಸೇರಿದಂತೆ ಇನ್ನಿತರ ಭಾಗಗಳು ಕಾಣೆಯಾಗಿರುವ ಬಗ್ಗೆ ಹಾಗೂ ಹಲವಾರು ಹೊಲಿಗೆಗಳು ಕಾಣಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.
ಎಲ್ಲೆಲ್ಲೂ ಹೊಲಿಗೆ
FSUI ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಕಾರ ರಾಕೇಶ್​ ಅವರ ದೇಹದ ಮೇಲೆ ಯಥೇಚ್ಛವಾಗಿ ಹೊಲಿಗೆ ಹಾಕಲಾಗಿದೆ. ಕುತ್ತಿಗೆಯಿಂದ ದೇಹದ ಕೆಳಭಾಗದವರೆಗೂ 22 ಹೊಲಿಗೆ ಬಿದ್ದಿವೆ. ಹಾಗೂ ಕಿಬವಿಯಿಂದ ಕಿವಿಗೆ 21 ಹೊಲಿಗೆ ಹಾಕಲಾಗಿದೆ ಎನ್ನುವ ಗಂಭೀರ ವಿಚಾರಗಳು ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲದೇ ರಾಕೇಶ್​ ಮೃತದೇಹವನ್ನು ಒಂದು ತಿಂಗಳ ಕಾಲ ಫ್ರೀಜ್‌ನಲ್ಲಿ ಇಡಲಾಗಿದೆ. ದೇಹದಲ್ಲಿ ಮೆದುಳು, ಹೃದಯ, ಶ್ವಾಸಕೋಶ, ಯಕೃತ್ತು, ಮೇದೋಜಿರಕಾಂಗ ಸೇರಿದಂತೆ ಹಲವು ಮುಖ್ಯ ಭಾಗ ಕಾಣೆಯಾಗಿದೆ ಎಂದು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಭಾರತೀಯರ ಸುರಕ್ಷತೆ ಬಗ್ಗೆ ಆತಂಕ

ಸದ್ಯ ರಾಕೇಶ್​ ಮೃತದೇಹದಲ್ಲಿ ಕಾಣಿಸಿಕೊಂಡ ಭೀಕರ ಸತ್ಯವು, ವೆನೆಜುವೆಲಾದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ಸದ್ಯ ಸಾಕಷ್ಟು ಗೊಂದಲ ಎದ್ದಿದೆ. ಹಲವರು ಈ ಬಗ್ಗೆ ಆತಂಕ ವ್ಯಕ್ತಡಿಸಿದ್ದಾರೆ. ಇದು ಸ್ವೀಕಾರಾರ್ಹವಲ್ಲ. ನಾವಿಕರು ಬಲಿಪಶುಗಳಾಗುತ್ತಿದ್ದಾರೆ. ವೆನೆಜುವೆಲಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಂಸ್ಥೆ ಒತ್ತಾಯಿಸಿದೆ.

ಕುಟುಂಬ ಹೇಳಿದ್ದೇನು?

ಮೊದಲಿಗೆ ರಾಕೇಶ್​ರ ಕಂಪನಿಯಿಂದ ಕುಟುಂಬಸ್ಥರಿಗೆ, ಅವರು ಹಡಗಿನಲ್ಲಿ ಕೆಲಸ ಮಾಡುವಾಗ ಕೆಳಕ್ಕೆ ಬಿದ್ದು ಗಾಯಗೊಂಡಿದ್ದಾರೆ ಎನ್ನುವ ಕರೆ ಬಂದಿತ್ತು. ಮಾರನೇ ದಿನ ಆತ ಬದುಕೋದು ಶೇ.95ರಷ್ಟು ಕಷ್ಟ ಎಂದಿದ್ದರು. ಸಂಜೆ ವೇಳೆಗೆ ಮೃತಪಟ್ಟಿರುವುದಾಗಿ ಮಾಹಿತಿ ಸಿಕ್ಕಿತ್ತು. ರಾಕೇಶ್​ ಮೃತಪಟ್ಟ 60 ದಿನದ ಬಳಿಕ ದೇಹ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯನ್ನು ಸಹ ನೀಡಿಲ್ಲ ಹೀಗಾಗಿ ಇಂದೊಂದು ಅನುಮಾನಸ್ಪದ ಸಾವು ಎಂದು ರಾಕೇಶ್​ ತಂದೆ ಆಕ್ರೋಶ ವ್ಯಕ್ತಪಡಿಸಿದರು.

FSUI ಕಿಡಿ

ಸಾಮಾನ್ಯವಾಗಿ ಮರೋಣೋತ್ತರ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ದೇಹದ ಕೆಲವು ಅಂಗಾಂಗವನ್ನು ತೆಗೆದು ಪರೀಕ್ಷಿಸಲಾಗುತ್ತದೆ. ಆದರೆ ಯಾವುದೇ ಆಟೋಪ್ಸಿ ರಿಪೋರ್ಟ್​ ನೀಡದೆ ಅಥವಾ ವಿವರಣೆಯನ್ನು ನೀಡದೆ, ಇಷ್ಟೆಲ್ಲ ಅಂಗಾಂಗ ತೆಗೆದು ಹಾಕಿರುವುದು ಸಾವಿನ ಹಿಂದಿನ ರಹಸ್ಯವೇನು ಎನ್ನುವ ಸಂಶಯಕ್ಕೆ ಎಡೆ ಮಾಡಿಕೊಟ್ಟಂತಾಗಿದೆ.
ಈ ಘಟನೆಯನ್ನು ಸಾಮಾನ್ಯ ಎಂದು ಕಡೆಗಣನೆ ಮಾಡಲು ಸಾಧ್ಯವಿಲ್ಲ ವೆನೆಜುವೆಲಾದಲ್ಲಿ ಭಾರತೀಯರನ್ನು ಬಲಿಪಶುಗಳಾಗಿ ಪರಿಗಣನೆ ಮಾಡಲಾಗುತ್ತಿದೆ. ರಾಕೇಶ್​ ಸಾವಿನ ಹೊಣೆಯಲ್ಲಿ ಅಲ್ಲಿನ ಸರ್ಕಾರ ಹಾಗೂ ಹಡಗು ಕಂಪನಿ ಹೊರಬೇಕು ಎಂದು ಕಿಡಿಕಾರಿದರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net