ಮಗುವಿನ ಕೈಗೆ ದುಬಾರಿ ಫೋನ್ ಕೊಟ್ರೆ ಹೀಗೇ ಆಗೋದು! ವೈರಲ್ ವಿಡಿಯೋ ನೋಡಿ ಹೀಗೆಂದಿದ್ದೇಕೆ ನೆಟ್ಟಿಗರು...iPhone In Lake

iPhone In Lake  ಚಿತ್ರ Instagram
iPhone In Lake ಚಿತ್ರ Instagram
Published on
iPhone In Lake: ಕುಟುಂಬದೊಂದಿಗೆ ಪ್ರವಾಸ ಕೈಗೊಳ್ಳುವುದು, ದೋಣಿ ವಿಹಾರ ಮಾಡುವುದು ಮನಸ್ಸಿಗೆ ಮುದ ನೀಡುವ ಸಂಗತಿ. ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಾ, ಆ ಕ್ಷಣಗಳನ್ನು ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿಯುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ, ಇಂತಹದೇ ಒಂದು ಆಹ್ಲಾದಕರ ದೋಣಿ ಪ್ರಯಾಣವು ಒಂದು ಕುಟುಂಬಕ್ಕೆ ಅತ್ಯಂತ ದುಬಾರಿಯಾಗಿ ಪರಿಣಮಿಸಿದ ಘಟನೆ ಇತ್ತೀಚೆಗೆ ನಡೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 

ಘಟನೆ ಏನು?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿರುವ ವಿಡಿಯೋದಲ್ಲಿ ಸರೋವರದಲ್ಲಿ ಕುಟುಂಬವೊಂದು ದೋಣಿ ಪ್ರಯಾಣವನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ದೋಣಿ ಮೇಲೆ ಕುಳಿತಿರುವ ಸಣ್ಣ ಬಾಲಕನೊಬ್ಬನ ಕೈಯಲ್ಲಿ ತಾಯಿಯ ಐಫೋನ್​ ಇರುತ್ತದೆ. ಆದಾಗ್ಯೂ, ಮಗು ಯಾವುದೇ ಮುನ್ಸೂಚನೆ ನೀಡದೆ ತನ್ನ ಕೈಯಲ್ಲಿದ್ದ ಫೋನ್​​ನ್ನು ನೇರವಾಗಿ ಸರೋವರಕ್ಕೆ ಎಸೆಯುತ್ತಿರುವುದನ್ನು ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ತಮಾಷೆ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕ ನೆಟ್ಟಿಗರ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು, "ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಐಫೋನ್ ದೊಡ್ಡ ಮಟ್ಟದ 'ಸ್ಪ್ಲಾಶ್' ಮಾಡ್ತಿದೆ ಅಂತ ಈ ಮಗು ತುಂಬಾ ಕೇಳಿರ್ಬೇಕು, ಅದಕ್ಕೆ ಸ್ವತಃ ತಾನೇ ನೀರಿಗೆ ಎಸೆದು ಅದು ಹೇಗೆ ಸ್ಪ್ಲಾಶ್ ಆಗುತ್ತೆ ಅಂತ ನೋಡಲು ಬಯಸಿದ್ದಾನೆ ಅನ್ಸುತ್ತೆ ಎಂದು ಕಾಮೆಂಟ್​ ಮಾಡಿದ್ದಾರೆ.
ಇನ್ನೊಬ್ಬ ಬಳಕೆದಾರ ಅಯ್ಯೋ ಪಾಪ, ಫೋನ್‌ಗೆ ಈಜಾಡಬೇಕು ಅನ್ನಿಸಿರಬೇಕು! ಅಮ್ಮ ನೀರನ್ನು ಹತ್ತಿರದಿಂದ ನೋಡಲಿ ಎಂದು ಮಗು ಸಹಾಯ ಮಾಡಿದ್ದಾನೆ ಅಷ್ಟೇ ಎಂದು ಕಾಮೆಂಟ್ ಮಾಡಿದ್ದಾರೆ.

ಭದ್ರತೆಯ ಲೋಪ: ತೀವ್ರ ಆಕ್ರೋಶ

ಈ ಎಲ್ಲ ತಮಾಷೆಗಳ ಆಚೆಗೆ, ವಿಡಿಯೋ ವೀಕ್ಷಿಸಿದ ಹಲವರು ಅತ್ಯಂತ ಗಂಭೀರವಾದ ವಿಷಯವೊಂದನ್ನು ಎತ್ತಿ ತೋರಿಸಿದ್ದಾರೆ. ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಆ ಸಣ್ಣ ಮಗುವಿಗೆ ಯಾವುದೇ ಲೈಫ್ ಜಾಕೆಟ್ ಧರಿಸಿರಲಿಲ್ಲ! ನೀರಿನ ಮಧ್ಯೆ ದೋಣಿ ಸಾಗುತ್ತಿದ್ದರೂ ಮಗುವಿನ ಸುರಕ್ಷತೆಗೆ ಆದ್ಯತೆ ನೀಡದಿರುವುದು ಪೋಷಕರು ಮತ್ತು ದೋಣಿ ನಿರ್ವಾಹಕರ ಕಡೆಯಿಂದ ನಡೆದಿರುವ ಬಹುದೊಡ್ಡ ಸುರಕ್ಷತಾ ಲೋಪ ಎಂದು ಹಲವರು ತೀವ್ರವಾಗಿ ಟೀಕಿಸಿದ್ದಾರೆ.
"ಮಗುವಿಗೆ ಲೈಫ್ ಜಾಕೆಟ್ ಧರಿಸದೇ ಇರುವುದು ಸುರಕ್ಷತಾ ಕ್ರಮಗಳಲ್ಲಿ ನಡೆದಿರುವ ಅತ್ಯಂತ ಗಂಭೀರ ಹಾಗೂ ದೊಡ್ಡ ಲೋಪವಾಗಿದೆ." ಎಂದು ಡಾ. ಪುಷ್ಪಾ ಕಿನಿ ಹೇಳಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net