'ಮೀಟಿಂಗ್​​ ಮುಂದೂಡಿ CJP ಪ್ರೊಟೆಸ್ಟ್​ನಲ್ಲಿ ಭಾಗಿಯಾಗು;'ಬಾಸ್​ ಆಫರ್​ ಬಗ್ಗೆ ಕೊಂಡಾಡಿದ ಟೆಕ್ಕಿ, ವಿಡಿಯೋ ವೈರಲ್​.. CJP Protest

Boss Asks Employee To Attend CJP Protest
Boss Asks Employee To Attend CJP Protest
Published on

ಪ್ರಮುಖ ಮುಖ್ಯಾಂಶಗಳು

  • ಸೋಮವಾರ ಕಾಕ್ರೋಚ್​ ಜನತಾ ಪಾರ್ಟಿಯಿಂದ ನಡೆದ ಬೃಹತ್​ ಪ್ರತಿಭಟನೆ.
  • ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಪೋಷಕರು ಸೇರಿದಂತೆ ಅನೇಕರು ಭಾಗಿ, ಪೊಲೀಸರಿಂದ ಲಾಠಿ ಏಟು.
  • ಸಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾಗಲು ಅನುಮತಿ ಕೊಟ್ಟ ಕಂಪನಿ ಬಾಸ್​​, ನೆಟ್ಟಗರು ಶಾಕ್.
Boss Asks Employee To Attend CJP Protest: ಕಾಕ್ರೋಚ್​ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯು ಭಾರತದಾದ್ಯಂತ ಭಾರಿ  ಸಂಚಲನವನ್ನು ಸೃಷ್ಟಿಸಿದೆ.  ಬಾಲಿವುಡ್​ ಸೆಲಬ್ರೆಟಿಗಳು,  ಗಾಯಕರು, ಸಾಹಿತಿಗಳು ವಿದ್ಯಾರ್ಥಿಗಳ ಪರ ನಿಂತಿದ್ದಾರೆ.  ನ್ಯಾಯಯುತವಾಗಿ ಹಕ್ಕು ಕೇಳುವವರ ವಿರುದ್ಧ ಹಿಂಸಾತ್ಮಕವಾಗಿ ನಡೆಸಿಕೊಳ್ಳಬೇಡಿ, ಅವರ ಮನವಿ ಆಲಿಸಿ ಎಂದು ಭರವಸೆ ನೀಡುತ್ತಿದ್ದಾರೆ. ಈ ಮಧ್ಯೆ ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋವೊಂದು ಭಾರಿ ವೈರಲ್​ ಆಗುತ್ತಿದೆ. ಅದು, ಬಾಸ್​ವೊಬ್ಬರು ತನ್ನ  ಕಾರ್ಮಿಕರನಿಗೆ ಸಿಜೆಪಿ ಪ್ರೊಟೆಸ್ಟ್​ನಲ್ಲಿ ಭಾಗಿ ಎಂದಿದ್ದು..
ಹೌದು,   ದೆಹಲಿಯ ಜಂತರ್​​ ಮಂತರ್​ ಸಮೀಪ ಕಾಕ್ರೋಚ್​ ಜನತಾ ಪಾರ್ಟಿ ನೇತೃತ್ವದಲ್ಲಿ ವಿದ್ಯಾರ್ಥಿಗಳು,  ಪೋಷಕರು ಹಾಗೂ  ಶಿಕ್ಷಕರು  ರಸ್ತೆಗಿಳಿದು ಪ್ರತಿಭಟನೆಯಲ್ಲಿ ಭಾಗಿಯಾದರು. ಒಂದು ಕಡೆ ಪೊಲೀಸರ ಲಾಠಿ ಚಾರ್ಜ್​ಗೆ ಒಳಗಾದ ವಿಡಿಯೋಗಳು ಹರಿದಾಡುತ್ತಿದೆ. ಮತ್ತೊಂದು ಕಡೆ ಯುವಕನೊಬ್ಬ ಪ್ರಧಾನಿ  ಮೋದಿ ಅವರನ್ನು ವ್ಯಂಗ್ಯ ಮಾಡುವಂತೆ ಮೆಲೋಡಿ ಚಾಕೋಲೇಟ್​ ಅನ್ನು ಪೊಲೀಸರಿಗೆ ಹಂಚುತ್ತಿರುವ ವಿಡಿಯೋ ವೈರಲ್​ ಆಗಿತ್ತು. ಮತ್ತೊಂದು ಯುವಕನೊಬ್ಬ ತನ್ನ ಸ್ಟಾರ್ಟ್​ ಅಪ್ ಕಂಪನಿಯ ಬಾಸ್​ ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ಹೇಗೆ ಬೆಂಬಲ ಕೊಟ್ಟರು ಎನ್ನುವುದನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾನೆ. 

ವೈರಲ್ ಆದ ವಿಡಿಯೋದಲ್ಲಿ ಹೀಗಿದೆ

ನನ್ನ ಬಾಸ್​​​ ನನಗೆ ಮಧ್ಯರಾತ್ರಿ ಮೆಸೇಜ್​ ಮಾಡಿದ್ದರು. ಸಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದೀಯಾ ಎಂದು ಕೇಳಿದರು. ನಾನು ಬೆಳಿಗ್ಗೆ ಮೀಟಿಂಗ್​ ಇದೆ ಎಂದೆ ಆಗ ಅವರು ಬೆಳಿಗ್ಗೆ ನಿಗದಿಯಾಗಿದ್ದ ಮೀಟಿಂಗ್​ಗಳನ್ನು ಮಧ್ಯಾಹ್ನ 2 ಗಂಟೆಯ ನಂತರ ಮುಂದೂಡುವಂತೆ ಹೇಳಿ ಕಾಕ್ರೋಚ್​ ಜನತಾ ಪಾರ್ಟಿಯ ಪ್ರತಿಭಟನೆಗೆ ಭಾಗಿಯಾಗು ಎಂದು ಹೇಳಿದರು. ಯಾವುದೇ ಸಮಸ್ಯೆಗಳು ಎದುರಾದರೆ,  ತಿಳಿಸಿ ಎಂದು ಅವರು ಹೇಳಿದರು ಎನ್ನುವುದಾಗಿ  ಯುವಕನೊಬ್ಬ ಮಾತನಾಡಿದ್ದಾರೆ.ಪ್ರತಿಭಟನೆಯ ನಂತರ, ಅವರು ಪ್ರತಿಭಟನಾ ಸ್ಥಳದಿಂದ ನೇರವಾಗಿ ತಮ್ಮ ಕಚೇರಿಗೆ ತೆರಳಲಿದ್ದಾರೆ. 
ಸಿಜೆಪಿ ನೇತೃತ್ವದ ಪ್ರತಿಭಟನೆಯು ಸೋಮವಾರ 'ಸಂದಾಸ್ ಚಲೋ' ಮಾರ್ಚ್ ಅನ್ನು ಸಹ ನಡೆಸಿತು, ನಂತರ ಸಿಜೆಪಿ ವಕ್ತಾರರು ಬಿಜೆಪಿಯ ಜೆಪಿ ನಡ್ಡಾ ಅವರನ್ನು ಭೇಟಿಯಾದರು. ಆದರೆ ನಾಲ್ಕು ಗಂಟೆ ವ್ಯರ್ಥವಾಯ್ತು ಯಾವುದೇ ಪ್ರಯೋಜನವಾಗಲಿಲ್ಲ ಎಂದು ಅವರು ಸಿಜೆಪಿಯ ನಾಯಕರು ಹೇಳಿಕೆ ನೀಡಿದ್ದಾರೆ.

ನೆಟ್ಟಿಗರು ಹೀಗಂದ್ರು

ನಾವು ಕರ್ತವ್ಯದಲ್ಲಿದ್ದೆವು ಹಾಗಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ನಿಮ್ಮ ಕಂಪನಿಯಾವುದು ಸರ್. ಪುಣ್ಯ ಮಾಡಿದ್ದೀರಿ ನೀವು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.  

ಅದಿತಿ, ನಟಿ-ನಿರ್ದೇಶಕಿ ರೇವತಿ ಹಾಗೂ ಸಿದ್ಧಾರ್ಥ್​​ರಿಂದ ಬೆಂಬಲ

ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್: ಘಟನೆಯ ವೀಡಿಯೊಗಳು ಹಾಗೂ ವರದಿಗಳನ್ನು ಹಂಚಿಕೊಂಡಿರುವ ನಟ ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮತ್ತು ಶಾಂತಿಯುತ ಪ್ರತಿಭಟನೆ ನಡೆಸುವ ಹಕ್ಕಿದೆ. ಸಾಮಾನ್ಯ ಜನರು ಹಾಗೂ ವಿದ್ಯಾರ್ಥಿಗಳ ಮೇಲೆ ನಡೆದ ಇಂತಹ ಕ್ರೌರ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net