ಅಹಮದಾಬಾದ್ ಮತ್ತು ನೋಯ್ಡಾದ ಪ್ರಮುಖ ಶಾಲೆಗಳಿಗೆ ಬಾಂಬ್ ಬೆದರಿಕೆ: ಬಾಂಬ್ ನಿಷ್ಕ್ರಿಯ ದಳದಿಂದ ಮುಂದುವರಿದ ಶೋಧಕಾರ್ಯ | Bomb Threat

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಅಹಮದಾಬಾದ್‌ನ ಕ್ಸೇವಿಯರ್ಸ್ ಮತ್ತು ಸೇಂಟ್ ಕಬೀರ್ ಶಾಲೆಗಳಿಗೆ ಬಾಂಬ್​ ಬೆದರಿಕೆ ಕರೆ
  • ಸ್ಥಳಕ್ಕೆ ಆಗಮಿಸಿದ ಬಾಂಬ್​ ನಿಷ್ಕ್ರಿಯ ಮತ್ತು ಶ್ವಾನ ದಳ
  • ನೋಯ್ಡಾದ ಹಲವು ಶಾಲೆಗಳಿಗೆ ಸಹ ಬಂದಿರುವ ಬಾಂಬ್​ ಬೆದರಿಕೆ ಕರೆ
ಅಹಮದಾಬಾದ್‌: ಶುಕ್ರವಾರ(ಜ.23) ಅಹಮದಾಬಾದ್‌ನ ಕ್ಸೇವಿಯರ್ಸ್ ಮತ್ತು ಸೇಂಟ್ ಕಬೀರ್ ಸೇರಿದಂತೆ ಹಲವಾರು ಶಾಲೆಗಳಿಗೆ ಬಾಂಬ್ ಬೆದರಿಕೆ (Bomb Threat) ಕರೆಗಳು ಬಂದಿವೆ ಎಂದು ವರದಿಯಾಗಿದೆ.
ಬಾಂಬ್ ಬೆದರಿಕೆ ಮೇಲ್ ಸ್ವೀಕರಿಸಿದ ಕೂಡಲೇ, ಬಾಂಬ್ ನಿಷ್ಕ್ರಿಯ ದಳ ಮತ್ತು ವಿಧಿವಿಜ್ಞಾನ ತಂಡಗಳು ತನಿಖೆ ನಡೆಸುತ್ತಿದೆ ಎಂದು ಅಹಮದಾಬಾದ್‌ನ ಅಪರಾಧ ನಿಗ್ರಹ ವಿಭಾಗ ಹೇಳಿಕೆಯಲ್ಲಿ ತಿಳಿಸಿದೆ. ಇದೇ ರೀತಿಯ ಬಾಂಬ್ ಬೆದರಿಕೆಗಳು ನೋಯ್ಡಾದ ಖಾಸಗಿ ಶಾಲೆಗಳಿಗೂ ಬಂದಿದ್ದು, ಮುನ್ನೆಚ್ಚರಿಕೆ ಕ್ರಮ ಅನುಸರಿಸಲಾಗುತ್ತಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಬೆದರಿಕೆ ಬಂದ ನಂತರ ನೋಯ್ಡಾದ ಶಾಲೆಗೆ ಭದ್ರತಾ ಸಿಬ್ಬಂದಿಯ ತಂಡವನ್ನು ಕಳುಹಿಸಲಾಗಿದ್ದು, ಬಾಂಬ್ ಮತ್ತು ಶ್ವಾನ ದಳವು ಈ ವಿಷಯದ ಬಗ್ಗೆ ತನಿಖೆ ನಡೆಸಲು ಶಾಲೆಗೆ ಭೇಟಿ ನೀಡಿದೆ. ಇದಲ್ಲದೆ, ಶಾಲೆಯು ವಿದ್ಯಾರ್ಥಿಗಳನ್ನು ಗೊತ್ತುಪಡಿಸಿದ ಡ್ರಾಪ್-ಆಫ್ ಪಾಯಿಂಟ್‌ಗಳಿಗೆ ಹಿಂತಿರುಗಿಸಲು ಬಸ್‌ಗಳ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.
ನೋಯ್ಡಾದ ಮತ್ತೊಂದು ಶಾಲೆಗೆ ಶುಕ್ರವಾರ(ಜ.23) ಬೆಳಿಗ್ಗೆ ಬಾಂಬ್ ಬೆದರಿಕೆ ಬಂದಿದೆ. ಪ್ರಿಯ ಪೋಷಕರೇ, ಶಾಲೆಗೆ ಬಾಂಬ್ ಬೆದರಿಕೆ ಬಂದ ಹಿನ್ನಲೆ ಮುನ್ನೆಚ್ಚರಿಕೆ ಕ್ರಮವಾಗಿ, ಶಾಲೆ ಇಂದು ಮುಚ್ಚಲ್ಪಡುತ್ತದೆ. ಇಂದು ಯಾವುದೇ ಬಸ್‌ಗಳ ಸಂಚಾರವಾಗಲೀ ಆನ್‌ಲೈನ್ ತರಗತಿಗಳಾಗಲೀ ಇರುವುದಿಲ್ಲ ಎಂದು ಸೆಕ್ಟರ್ 62 ರ ಫಾದರ್ ಆಗ್ನೆಲ್ ಶಾಲೆಯು ಅಧಿಸೂಚನೆಯಲ್ಲಿ ತಿಳಿಸಿದೆ.

ಪಂಜಾಬ್‌ನ ಮೋಗಾದ ಶಾಲೆಗೆ ಬಾಂಬ್ ಬೆದರಿಕೆ

ಕಳೆದ ವಾರ, ಪಂಜಾಬ್‌ನ ಮೋಗಾದಲ್ಲಿರುವ ಒಂದು ಶಾಲೆಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಅದರ ಬಗ್ಗೆ ಮಾಹಿತಿ ಬಂದ ಕೂಡಲೇ ಪೊಲೀಸರು ಆವರಣವನ್ನು ಸಂಪೂರ್ಣವಾಗಿ ಶೋಧಿಸಿದ್ದಾರೆ. ಮೋಗಾದ ಉಪ ಪೊಲೀಸ್ ವರಿಷ್ಠಾಧಿಕಾರಿ ಗುರುಪ್ರೀತ್ ಸಿಂಗ್, ಶಾಲಾ ಪ್ರಾಂಶುಪಾಲರು ಬೆದರಿಕೆ ಇಮೇಲ್ ಬಗ್ಗೆ ಪೊಲೀಸರಿಗೆ ಎಚ್ಚರಿಕೆ ನೀಡಿದ್ದು, ನಂತರ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ ಎಂದು ಹೇಳಿದರು.
ನಾವು ಶಾಲಾ ಆವರಣವನ್ನು ಪರಿಶೀಲಿಸಿದ್ದು, ಮಕ್ಕಳನ್ನು ಸ್ಥಳಾಂತರಿಸಿದ್ದೇವೆ ಎಂದು ಅವರು ಹೇಳಿದರು. ಕಳೆದ ತಿಂಗಳು, ಪಟಿಯಾಲ ಮತ್ತು ಜಲಂಧರ್‌ನ ಕೆಲವು ಶಾಲೆಗಳಿಗೆ ಇದೇ ರೀತಿಯ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದವು. ಆದಾರೆ ಅವು ಹುಸಿ ಬಾಂಬ್​ ಬೆದರಿಕೆಗಳಾಗಿದ್ದವು ಎಂದು ತನಿಖೆ ನಂತರ ನಿಜಾಂಶ ಹೊರಬಿದ್ದಿತ್ತು.

ಕಳೆದ ತಿಂಗಳು ನೋಯ್ಡಾದ ಶಾಲೆಗಳಿಗೆ ಬಾಂಬ್ ಬೆದರಿಕೆ

ಕಳೆದ ತಿಂಗಳು, ನೋಯ್ಡಾದ ಹಲವಾರು ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದವು. ತನಿಖೆ ನಂತರ ಅವು ಹುಸಿ ಬಾಂಬ್​ ಬೆದರಿಕೆ ಎಂದು ತಿಳಿದುಬಂದಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರಾಜೀವ್ ನಾರಾಯಣ್ ಮಿಶ್ರಾ ವರದಿಗಾರರಿಗೆ ತಿಳಿಸಿದರು.
ಮಾಹಿತಿ ಪಡೆದ ನಂತರ, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳೀಯ ಪೊಲೀಸ್ ತಂಡಗಳು, ಬಾಂಬ್ ನಿಷ್ಕ್ರಿಯ ದಳಗಳು, ಶ್ವಾನ ದಳಗಳು ಶಾಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದರು ಎಂದು ಮಿಶ್ರಾ ಹೇಳಿದರು. ಮುನ್ನೆಚ್ಚರಿಕೆ ಕ್ರಮವಾಗಿ ಹತ್ತಿರದ ಮೆಟ್ರೋ ನಿಲ್ದಾಣಗಳು, ಮಾರುಕಟ್ಟೆಗಳು ಮತ್ತು ಇತರ ಜನದಟ್ಟಣೆಯ ಸ್ಥಳಗಳು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತಾ ತಂಡಗಳು ಶೋಧ ನಡೆಸಿದವು ಎಂದು ಅಧಿಕಾರಿ ಹೇಳಿದರು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net