ಗುರುವಾರ (ಸೆ.10) ಸಂಜೆ ನಡೆದ ಈ ಘಟನೆಯಲ್ಲಿ, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮತ್ತು ಬಾಂಬ್ ಸ್ಕ್ವಾಡ್ ಸೇರಿದಂತೆ ಹಲವು ತನಿಖಾ ಸಂಸ್ಥೆಗಳು ತನಿಖೆ ನಡೆಸಿದ್ದು, ಬಾಂಬ್ ಎಂದು ಬರೆದ ಟಿಶ್ಯೂ ಪೇಪರ್ ಅನ್ನು ಸದ್ಯಕ್ಕೆ ವಶಪಡಿಸಿಕೊಳ್ಳಲಾಗಿದೆ. ಅಸಲಿಗೆ, ಇದನ್ನು ಯಾರು ಬರೆದಿದ್ದಾರೆ ಎಂಬುದನ್ನು ಪತ್ತೆಹಚ್ಚಲು ತನಿಖಾ ದಳ, ವಿಮಾನದೊಳಗಿದ್ದ 133 ಪ್ರಯಾಣಿಕರು ಮತ್ತು ಸಿಬ್ಬಂದಿಗಳ ಹ್ಯಾಂಡ್ರೈಟಿಂಗ್ ಅನ್ನು ಪರಿಶೀಲಿಸಿದೆ.