ಆರ್​ಎಸ್ಎಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಾಲಿವುಡ್ ನಟ ಸಲ್ಮಾನ್ ಖಾನ್ | Salman Khan

ಬಾಲಿವುಡ್ ನಟ ಸಲ್ಮಾನ್ ಖಾನ್
ಬಾಲಿವುಡ್ ನಟ ಸಲ್ಮಾನ್ ಖಾನ್
Published on

ಪ್ರಮುಖ ಮುಖ್ಯಾಂಶಗಳು

  • ಆರ್​ಎಸ್​ಎಸ್ ಕಾರ್ಯಕ್ರಮದಲ್ಲಿ ಭಾಗಿಯಾದ ನಟ ಸಲ್ಮಾನ್ ಖಾನ್
  • ಆರ್​ಎಸ್ಎಸ್​​ನ ಉಪನ್ಯಾಸ ವ್ಯಾಖ್ಯಾನ್‌ಮಾಲಾ ಕಾರ್ಯಕ್ರಮದಲ್ಲಿ ಭಾಗಿ
  • ಸಲ್ಮಾನ್ ಖಾನ್, ರಣಬೀರ್ ಕಪೂರ್ ಸೇರಿ 900ಕ್ಕೂ ಹೆಚ್ಚು ಗಣ್ಯರು ಭಾಗಿ
ಮುಂಬೈ: ಮುಂಬೈನಲ್ಲಿ ನಡೆಯುತ್ತಿರುವ ಎರಡು ದಿನಗಳ ರಾಷ್ಟ್ರೀಯ ಸ್ವಯಂಸೇವಕ ಸಂಘದ ‘100 ವರ್ಷಗಳ ಸಂಘ ಪಯಣ: ಹೊಸ ದಿಗಂತಗಳು‘ ಎಂಬ ಎರಡು ದಿನಗಳ ಉಪನ್ಯಾಸ ವ್ಯಾಖ್ಯಾನ್‌ಮಾಲಾ ಕಾರ್ಯಕ್ರಮದಲ್ಲಿ ಶನಿವಾರ (ಫೆ.07) ಬಾಲಿವುಡ್​ ನಟ ಸಲ್ಮಾನ್ ಖಾನ್ ಭಾಗವಹಿಸಿದ್ದರು.
ನೆಹರು ಸೆಂಟರ್ ಆಡಿಟೋರಿಯಂನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಅಷ್ಟೇ ಅಲ್ಲದೇ, ನಟ ರಣಬೀರ್ ಕಪೂರ್, ನಿರ್ದೇಶಕ ಸುಭಾಷ್ ಘಾಯ್ ಹಾಗೂ ಸಿಬಿಎಫ್‌ಸಿ ಅಧ್ಯಕ್ಷ ಪ್ರಸೂನ್ ಜೋಶಿ ಸೇರಿ ಕಾರ್ಯಕ್ರಮದಲ್ಲಿ 900 ಕ್ಕೂ ಹೆಚ್ಚು ಗಣ್ಯ ವ್ಯಕ್ತಿಗಳು, ಪ್ರಮುಖ ವಿಜ್ಞಾನಿಗಳು, ಕೈಗಾರಿಕೋದ್ಯಮಿಗಳು, ಕಲಾವಿದರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿರುವ ಆರ್​ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಸಂಘವು ಅಧಿಕಾರ ಅಥವಾ ಜನಪ್ರಿಯತೆಯನ್ನು ಬಯಸುವುದಿಲ್ಲ. ಒತ್ತಡದ ಗುಂಪಾಗುವ ಗುರಿಯನ್ನು ಹೊಂದಿಲ್ಲ, ಆದರೆ ಸಮಾಜವನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.
ಸಮಾಜವನ್ನು ಏಕೀಕರಿಸುವುದನ್ನು ಹೊರತುಪಡಿಸಿ ಬೇರೆ ಯಾವುದೇ ಕೆಲಸವನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಆರ್‌ಎಸ್‌ಎಸ್ ಬಹಳ ಹಿಂದೆಯೇ ನಿರ್ಧರಿಸಿತ್ತು. ಮತ್ತು ಆ ಕಾರ್ಯವನ್ನು ಸಾಧಿಸಿದ ನಂತರ ಅದು ಬೇರೆ ಯಾವುದೇ ಕಾರ್ಯಸೂಚಿಯನ್ನು ಅನುಸರಿಸುವುದಿಲ್ಲ ಎಂದು ತಿಳಿಸಿದ್ದಾರೆ.
ವಿವಿಧ ದೇಶಗಳಿಂದ ಜನರು ಭಾರತಕ್ಕೆ ಬಂದು ಸಂಘದ ಚಟುವಟಿಕೆಗಳನ್ನು ವೀಕ್ಷಿಸಲು ಆರ್‌ಎಸ್‌ಎಸ್ ಕಚೇರಿಗಳಿಗೆ ಭೇಟಿ ನೀಡುತ್ತಿದ್ದಾರೆ. ಅವರು ತಮ್ಮ ಯುವಕರಿಗೂ ಅದೇ ಮಾದರಿಯನ್ನು ಜಾರಿಗೆ ತರಲು ಬಯಸುತ್ತಿದ್ದಾರೆ. ಸಂಘವು ಬೇರೆ ಯಾವುದೇ ಸಂಘಟನೆಯೊಂದಿಗೆ ಸ್ಪರ್ಧೆಯಲ್ಲಿ ಇಲ್ಲ. ಯಾರನ್ನೂ ವಿರೋಧಿಸದೇ ನಮ್ಮ ಕೆಲಸವನ್ನು ಮಾಡಲಾಗುತ್ತಿದೆ ಎಂದಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net