45 ದಿನದಿಂದ ಕುಡುಕ ಪತಿ ನಾಪತ್ತೆ ಎಂದು ಪತ್ನಿ ದೂರು; ಮನೆಯ ಬಾತ್ರೂಂ ಟೈಲ್ಸ್ನಲ್ಲೇ ಮೃತದೇಹ ಪತ್ತೆ!..Agra Murder
Wife Buried Husband Body in Bathroom
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮೇ 18 ರಿಂದ ನಾಪತ್ತೆಯಾಗಿದ್ದ ಪತಿಗಾಗಿ ಹುಡುಕಾಡುವಂತೆ ನಟಿಸಿದ್ದ ಪತ್ನಿ.
ಮದ್ಯವ್ಯಸನಿ ಪತಿ ಕೊಂದು ಬಾತ್ರೂಂ ಟೈಲ್ಸ್ನೊಳಗೆ ಹೂತು ಹಾಕಿದ್ದ ಪತ್ನಿ ಅರೆಸ್ಟ್.
ದಂಪತಿ ನಡುವಿನ ಜಗಳವೇ ಕೊಲೆಗೆ ಕಾರಣ ಎಂದು ಪೊಲೀಸರ ತನಿಖೆಯಿಂದ ಬಯಲು.
ಅಗ್ರಾ: ಮಹಿಳೆಯೊಬ್ಬರು ತಮ್ಮ ಪತಿ 45 ದಿನದಿಂದ ಕಾಣುತ್ತಿಲ್ಲ ಎಂದು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ತನಿಖೆ ಶುರು ಮಾಡಿದ ಪೊಲೀಸರಿಗೆ ಸಿಕ್ಕಿದ್ದು ರೋಚಕ ಸತ್ಯ. ಪತಿಯನ್ನು ಕೊಂದು ಮನೆಯ ಬಾತ್ರೂಂ ಟೈಲ್ಸ್ನೊಳಗೆ ಹೂತು ಹಾಕಿರುವುದು ಬೆಳಕಿಗೆ ಬಂದಿದೆ.
ಹೌದು, ಸುರೇಂದ್ರ ಕುಮಾರ್ ಶರ್ಮಾ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ರೂಬಿ ಶರ್ಮಾರನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಕಾರ್ಯಾಚರಣೆಯ ವಿಡಿಯೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ
ಸುರೇಂದ್ರ ಕುಮಾರ್ ಶರ್ಮಾ ಮೇ 18 ರಿಂದಲೇ ಎಲ್ಲಿಗೋ ಹೋಗಿದ್ದಾರೆ. ವಾಪಸ್ ಬರಲಿದ್ದಾರೆ ಎಂದು ನೆರೆಹೊರೆಯವರಿಗೆ ಹಾಗೂ ಸಂಬಂಧಿಕರಿಗೆ ರೂಬಿ ಸುಳ್ಳು ಹೇಳುತ್ತಾ ಬಂದಿದ್ದಳು. ಆನಂತರ ಮೇ 26 ರಂದು ತಾನೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಳು. ದೂರಿನ ಆಧಾರ ಮೇಲೆ ರೇಣುಕಾಧಾಮ ಕಾಲೋನಿಯಲ್ಲಿರುವ ದಂಪತಿ ಮನೆಯಲ್ಲೇ ತನಿಖೆ ನಡೆಸಿದ ಪೊಲೀಸರಿಗೆ ಸತ್ಯ ತಿಳಿದುಬಂದಿದೆ
ಮನೆಯಲ್ಲಿ ತನಿಖೆ
ಶುಕ್ರವಾರ ಪೊಲೀಸರು ರೂಬಿ ಮನೆ ಪರಿಶೀಲನೆ ನಡೆಸುತ್ತಿದ್ದಾಗ, ಆಕೆಯ ಮುಖದಲ್ಲಿ ಭಯದ ಭಾವ, ನಡವಳಿಕೆಯಲ್ಲಿ ತೀವ್ರ ಅನುಮಾನ ಕಂಡುಬಂದಿದೆ. ಇದೇ ವೇಳೆ ಸುರೇಂದ್ರ ಅವರ ಸಹೋದರ ನೀಡಿದ ಕೆಲವು ಪ್ರಮುಖ ಮಾಹಿತಿಗಳು ಪೊಲೀಸರ ತನಿಖೆಗೆ ಹೊಸ ತಿರುವು ನೀಡಿತು.
ತಕ್ಷಣವೇ ಪೊಲೀಸರು ಮನೆಯೊಳಗೆ ತೀವ್ರ ಶೋಧ ನಡೆಸಲು ಮುಂದಾದರು. ಮನೆಯ ಬಾತ್ರೂಂನಲ್ಲಿ ಹೊಸದಾಗಿ ಟೈಲ್ಸ್ ಮತ್ತು ಪ್ಲಾಸ್ಟಿಂಗ್ ಮಾಡಿರುವಂತೆ ಕಂಡು ಬಂತು. ನೆಲದ ಅಡಿಯಲ್ಲಿ ಏನೋ ಮುಚ್ಚಿಡಲಾಗಿದೆ ಎಂದು ಶಂಕಿಸಿದ ಅಧಿಕಾರಿಗಳು, ಬಾತ್ ರೂಂ ನೆಲವನ್ನು ಅಗೆಯಲು ಆದೇಶಿಸಿದರು. ಕೆಲವೇ ಕ್ಷಣಗಳಲ್ಲಿ ಟೈಲ್ಸ್ ಅಡಿಯಿಂದ ಸುರೇಂದ್ರ ಅವರ ಕೊಳೆತು ಹೋಗಿದ್ದ ಶವ ಪತ್ತೆಯಾಗಿದೆ.
ಕುಟುಂಬ ಕಲಹವೇ ಕಾರಣ?
ಮೃತರ ಸಹೋದರ ಅನಿಲ್ ಶರ್ಮಾ ಮಾತನಾಡಿ, "ಸುರೇಂದ್ರ ಪ್ರತಿದಿನ ಮದ್ಯಪಾನ ಮಾಡುತ್ತಿದ್ದ, ಇದರಿಂದ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು . ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ, (ಏಜೆನ್ಸೀಸ್).