ಗಲಾಟೆಯ ನಂತರ ಆಕ್ರೋಶಗೊಂಡ ಆರೋಪಿಯು ಸ್ಥಳದಿಂದ ನಿರ್ಗಮಿಸಿದ್ದನು. ಆದರೆ, ಸುಮಾರು ಒಂದು ಗಂಟೆಯ ನಂತರ ತನ್ನ ಸಹಚರರೊಂದಿಗೆ ವಾಪಸ್ ಬಂದ ಆತ, ತನ್ನ ಸಹೋದರನ ಪರವಾನಗಿ ಹೊಂದಿದ ಪಿಸ್ತೂಲಿನಿಂದ ಜಿಮ್‌ನಲ್ಲಿದ್ದವರ ಮೇಲೆ ಮನಸೋಇಚ್ಛೆ ಗುಂಡು ಹಾರಿಸಿದ್ದಾನೆ. ಈ ದಾಳಿಯಲ್ಲಿ ಅಮರ್‌ದೀಪ್ (35), ಮನೀಶ್ (32) ಮತ್ತು ಆಕಾಶ್ (19) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ 19 ವರ್ಷದ ಆಕಾಶ್‌ನನ್ನು ಬೆನ್ನಟ್ಟಿದ ಆರೋಪಿ, ಆತನ ತಲೆಗೆ ಗುಂಡಿಕ್ಕಿ ಕ್ರೌರ್ಯ ಮೆರೆದಿದ್ದಾನೆ.