ಮಹಿಳಾ ಮೀಸಲಾತಿ ಮಸೂದೆಗೆ ಏಪ್ರಿಲ್17ರಂದು ಸೋಲಾಗಿದೆ. ಮಸೂದೆ ಪರ 298 ಸದಸ್ಯರು ಮತ ಚಲಾಯಿಸಿದರೆ, ಮಸೂದೆಗಳ ವಿರುದ್ಧ 230 ಸದಸ್ತೆಯ ಮತ ಚಲಾಯಿಸಿದರು. ಒಟ್ಟಾರೆಯಾಗಿ 528 ಮತ ಚಲಾಯಿಸಿದ್ದು, ಮಸೂದೆ ಅಂಗೀಕಾರಕ್ಕೆ 352 ಸದಸ್ಯರ ಬೆಂಬಲವಿಲ್ಲದೆ ವಿಫಲವಾಯಿತು. ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯು ಪರೀಕ್ಷೆಯಲ್ಲಿ ಸೋತ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸುದ್ದಿಗೋಷ್ಠಿ ನಡೆಸಿ, ಎನ್‌ಡಿಎ ಸರ್ಕಾರದ ವಿರುದ್ಧ ಗುಡುಗಿದರು.