

E20 Petrol:
ಭಾರತದಲ್ಲಿ ಪೆಟ್ರೋಲ್‌ಗೆ ಶೇ. 20 ರಷ್ಟು ಎಥನಾಲ್ ಬೆರೆಸಿದ E20 ಇಂಧನ ಪೂರೈಕೆ ಕಡ್ಡಾಯಗೊಳ್ಳುತ್ತಿರುವ ಬೆನ್ನಲ್ಲೇ ದೇಶಾದ್ಯಂತ ಸಾರ್ವಜನಿಕರಲ್ಲಿ ತೀವ್ರ ಚರ್ಚೆ ಮತ್ತು ಆತಂಕಗಳು ಆರಂಭವಾಗಿವೆ. ಇಂಧನ ಸ್ವಚ್ಛತೆ, ವಾಹನಗಳ ಮೈಲೇಜ್ ಕುಸಿತ ಹಾಗೂ ಇಂಜಿನ್‌ನ ಗಂಭೀರ ಬಿಡಿಭಾಗಗಳಿಗೆ ಉಂಟಾಗಬಹುದಾದ ಹಾನಿಯ ಕುರಿತು ವಾಹನ ಮಾಲೀಕರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಈ ಗೊಂದಲಗಳನ್ನು ನಿವಾರಿಸುವುದರ ಜೊತೆಗೆ ಎಥನಾಲ್ ಶ್ರೇಷ್ಠತೆಯನ್ನು ಸಾಬೀತುಪಡಿಸಲು ತೆಲಂಗಾಣದ ಬಿಜೆಪಿ ರಾಜ್ಯಸಭಾ ಸಂಸದ ಕೆ. ಕೊಂಡ ವಿಶ್ವೇಶ್ವರ್ ರೆಡ್ಡಿ ನಡೆಸಿದ ಪ್ರಯೋಗವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಮತ್ತೊಂದೆಡೆ, ಎಥನಾಲ್ ಯಾವುದೇ ಹೊಗೆಯಿಲ್ಲದೆ ಸ್ವಚ್ಛವಾಗಿ ಉರಿಯುವುದನ್ನು ನಿರೂಪಿಸಿ, ಇದು ಕಾರ್ಬನ್-ನ್ಯೂಟ್ರಲ್ ಮತ್ತು ಪರಿಸರ ಸ್ನೇಹಿ ಇಂಧನ ಎಂದರು. ಕಬ್ಬು, ಜೋಳ ಮತ್ತು ಅಕ್ಕಿಯಿಂದ ತಯಾರಾಗುವ ಎಥನಾಲ್ ಬಳಕೆಯಿಂದ ದೇಶದ ರೈತರಿಗೆ ಮತ್ತು ಆರ್ಥಿಕತೆಗೆ ನೆರವಾಗಲಿದ್ದು, ವಿದೇಶಿ ಇಂಧನ ಆಮದು ಕಡಿಮೆಯಾಗಲಿದೆ ಎಂದು ಅವರು ಪ್ರತಿಪಾದಿಸಿದರು.