ಬಿಜೆಪಿ ಉಪಮುಖ್ಯಮಂತ್ರಿ ಸ್ಥಾನದ ಭರವಸೆ ನೀಡಿದ್ದರೂ, ವಿಜಯ್ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ರಾಜಕೀಯಕ್ಕೆ ಹೊಸ ಶಕ್ತಿಯಾಗಲು ಪಣತೊಟ್ಟಿರುವ ವಿಜಯ್, ನೇರವಾಗಿ ಅಧಿಕಾರ ಹಿಡಿಯುವ ಹಂಬಲ ಹೊಂದಿದ್ದಾರೆ. ಆದರೆ, ಮೈತ್ರಿಕೂಟದ ಸಮೀಕರಣದಲ್ಲಿ ಈ ವಿಷಯವು ಸಂಧಾನದ ಪ್ರಮುಖ ಅಂಶವಾಗಿ ಉಳಿದಿದೆ.