ಸಂಘವು ಸ್ವಯಂಸೇವಕರನ್ನು ಅಭಿವೃದ್ಧಿಪಡಿಸುತ್ತದೆ, ಆದರೆ ಅದು ಅವರನ್ನು ಎಂದಿಗೂ ಕಂಟ್ರೋಲ್ ಮಾಡುವುದಿಲ್ಲ. ಭಾರತದ ಪರಮ ವೈಭವಕ್ಕಾಗಿ ಕೆಲಸ ಮಾಡಲು ಮೌಲ್ಯಗಳು, ಆಲೋಚನೆಗಳು ಮತ್ತು ಗುರಿಗಳನ್ನು ಸಹ ಬೇರೂರಿಸುತ್ತದೆ. ಸ್ವಯಂಸೇವಕರಿಂದ ನಡೆಸುವ ಬಿಜೆಪಿ, ವಿಎಚ್‌ಪಿ ಹಾಗೂ ವಿದ್ಯಾಭಾರತಿ ಸ್ವತಂತ್ರ ಗುರುತಿನೊಂದಿಗೆ ಕೆಲಸ ಮಾಡುತ್ತವೆ. ಅವರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ವಿವಿಧ ಪ್ರದೇಶಗಳಲ್ಲಿ ಮತ್ತು ವಿವಿಧ ರೀತಿಯಲ್ಲಿ ಸ್ವಯಂಸೇವಕರಲ್ಲದವರೊಂದಿಗೆ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.