ಬೃಹನ್ಮುಂಬೈ ಪಾಲಿಕೆಯಲ್ಲಿ ಬಿಜೆಪಿ-ಶಿವಸೇನಾ ಕಮಾಲ್; ಬಹುಮತದತ್ತ ಬಿಜೆಪಿ ಮೈತ್ರಿಕೂಟ; ಠಾಕ್ರೆ ಬ್ರದರ್ಸ್ ಕೈ ತಪ್ಪಿದ ಪಾಲಿಕೆ | BMC Elections

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮುಂಬೈ: ಮಹರಾಷ್ಟ್ರದ ಬೃಹನ್ಮುಂಬೈ ಸೇರಿ 28 ಪುರಸಭೆಗಳ ಚುನಾವಣಾ ಮತ ಎಣಿಕೆ ಮುಂದುವರೆದಿದ್ದು, ಮುಂಬೈ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ-ಶಿವಸೇನಾ(ಶಿಂಧೆ) ಜೋಡಿ ಕಮಾಲ್ ಮಾಡಿದ್ದು, 130ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ ಬಹುಮತವನ್ನು ಗಳಿಸಿದೆ.
ಮುಂಬೆ ಮಹಾನಗರ ಪಾಲಿಕೆಯ 227 ಸ್ಥಾನಗಳ ಪೈಕಿ ಬಿಜೆಪಿ 86 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಶಿಂಧೆ ಸೇನಾ 28 ಗಳಿಗೆ ಬಹುಮತಕ್ಕೆ ಬೇಕಾದ ಸಂಖ್ಯೆಯನ್ನು ಮೀರಿವೆ. ಇನ್ನೂ ವಿರೋಧ ಪಕ್ಷಗಳ ಪೈಕಿ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನಾ 63 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ರೆ, ಎಂಎನ್​ಎಸ್​ 6 ಸ್ಥಾನ, ಕಾಂಗ್ರೆಸ್​ ಕೇವಲ 9 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ಕಳೆದ ಮೂವತ್ತು ವರ್ಷಗಳಿಂದ ಉದ್ದವ್ ಠಾಕ್ರೆ ನೇತೃತ್ವದ ಅವಿಭಜಿತ ಶಿವಸೇನಾ ಪಕ್ಷದ ಹಿಡಿತದಲ್ಲಿದ್ದ ಮುಂಬೈ ಮಹಾನಗರ ಪಾಲಿಕೆ ಅವರ ಕೈ ಜಾರಿ ಬಿಜೆಪಿ ತೆಕ್ಕೆಗೆ ಜಾರಿದೆ. ಕಳೆದ 2017ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಶಿವಸೇನೆ ಗೆಲುವು ಸಾದಿಸಿ ಅಧಿಕಾರಕ್ಕೇರಿತ್ತು. ಐದು ವರ್ಷಗಳ ಅವಧಿ ಮುಗಿಯೋದರೊಳಗೆ ಶಿವಸೇನೆ ಇಬ್ಬಾಗವಾಗಿದೆ.
ಮಾಜಿ ಸಿಎಂ ಏಕನಾಥ್ ಶಿಂಧೆ ಪಕ್ಷದಿಂದ ಆಚೆ ಬಂದ ಬಳಿಕ ನಡೆದ ಚುನಾವಣೆ ಇದಾಗಿದೆ. ಗುರುವಾರ(ಜ. 15) ಮುಂಬೈ ಮಹಾನಗರ ಪಾಲಿಕೆ ಸೇರಿ 28 ನಗರಸಭೆ, ಪುರಸಭೆಗಳಲ್ಲಿ ಮತದಾನ ನಡೆದಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net