ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ರಾಹುಲ್ ಗಾಂಧಿ ಭಾಷಣದ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ರಾಹುಲ್ ಗಾಂಧಿ, ನೀವೆಲ್ಲರೂ ಎದ್ದು ನಿಂತು ಹೋರಾಡಬೇಕಿದೆ. ಆರ್‌ಎಸ್‌ಎಸ್ ಕಾರ್ಯಕರ್ತರು ನಿಮ್ಮ ಮನೆಗೆ ಬಂದು ನರೇಂದ್ರ ಮೋದಿ ಮತ್ತು ಅಮಿತ್ ಷಾ ಬಗ್ಗೆ ಮಾತನಾಡಿದರೆ, ಅವರ ಸಂಘಟನೆ, ಮೋದಿ ಮತ್ತು ಷಾ ಇಬ್ಬರೂ ದೇಶದ್ರೋಹಿಗಳು ಎಂದು ಅವರಿಗೆ ನೇರವಾಗಿಯೇ ಹೇಳಿ. ಅವರೆಲ್ಲರೂ ಸೇರಿ ದೇಶವನ್ನು ಮಾರಾಟ ಮಾಡುವ ಕೆಲಸ ಮಾಡಿದ್ದಾರೆ ಮತ್ತು ನಮ್ಮ ಸಂವಿಧಾನ, ಅಂಬೇಡ್ಕರ್ ಜಿ ಹಾಗೂ ಮಹಾತ್ಮಾ ಗಾಂಧಿ ಆಶಯಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಜನರಿಗೆ ತಿಳಿಸಿ ಎಂದು ಹೇಳುತ್ತಿರುವುದು ದಾಖಲಾಗಿದೆ.