ಇನ್ನು ರಾಹುಲ್ ಗಾಂಧಿ ನಡೆದುಕೊಂಡ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಾತನಾಡಿ, ಇದು ನಮ್ಮ ಇಡೀ ಈಶಾನ್ಯ ಭಾಗದ ಜನರಿಗೆ ಭಾರೀ ನೋವಾಗಿದೆ. ಅಲ್ಲಿನ ಸಂಸ್ಕೃತಿಗೆ ಮಾಡಿದ ಅಪಮಾನವಾಗಿದೆ ಎಂದು ಹೇಳಿದ್ದಾರೆ. ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡಿರುವ ಕಾಂಗ್ರೆಸ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಕಾರ್ಯಕ್ರಮದ ಸಮಯದಲ್ಲಿ ಪಟ್ಕಾ ಧರಿಸಿರಲಿಲ್ಲ ಎಂದು ಆರೋಪಿಸಿದೆ. ಮತ್ತೊಂದೆಡೆ, ಬಿಜೆಪಿ ಆರೋಪಗಳು ಕೇವಲ ರಾಜಕೀಯ ಸೇಡು, ಇದೊಂದು ಫೇಕ್ ಡ್ರಾಮ ಎಂದಿದೆ,(ಏಜೆನ್ಸೀಸ್).