ಬಂಗಾಳ ಚುನಾವಣೆ; 111 ಅಭ್ಯರ್ಥಿಗಳ 2ನೇ ಲಿಸ್ಟ್ ರಿಲೀಸ್ ಮಾಡಿದ ಬಿಜೆಪಿ | Bengal BJP List

Bengal BJP List | ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ
Bengal BJP List | ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ
Published on
ಕೋಲ್ಕತ್ತಾ: ಮುಂಬರುವ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಬಿಜೆಪಿ ಗುರುವಾರ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ( Bengal BJP List) ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ ಘಟಾನುಘಟಿ ನಾಯಕರು ಮತ್ತು ಚಿತ್ರರಂಗದ ತಾರೆಯರು ಸೇರಿದಂತೆ ಒಟ್ಟು 111 ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ.
ಬಿಜೆಪಿಯ ಈ ಎರಡನೇ ಪಟ್ಟಿಯಲ್ಲಿ ಅತ್ಯಂತ ಗಮನಾರ್ಹ ಹೆಸರು ಮಾಜಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿಶಿತ್ ಪ್ರಾಮಾಣಿಕ್ ಅವರದ್ದು. 40 ವರ್ಷದ ಪ್ರಾಮಾಣಿಕ್ ಅವರು 2024 ರವರೆಗೆ ಕೂಚ್ ಬೆಹಾರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಸೋತಿದ್ದ ಅವರಿಗೆ ಪಕ್ಷವು ಈಗ ಮಠಭಂಗ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಮೂಲಕ ಹೊಸ ಜವಾಬ್ದಾರಿ ನೀಡಿದೆ.
ಈ ಪಟ್ಟಿಯಲ್ಲಿ ಸುಮಾರು 19 ಮಹಿಳೆಯರಿಗೆ ಸ್ಥಾನ ನೀಡಲಾಗಿದ್ದು, ಖ್ಯಾತ ನಟಿ ರೂಪಾ ಗಂಗೂಲಿ ಸೋನಾರ್‌ಪುರ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರೆ, 2024 ರ ಲೋಕಸಭಾ ಚುನಾವಣೆಯಲ್ಲಿ ಬಸಿರ್ಹತ್‌ನಿಂದ ಗಮನ ಸೆಳೆದಿದ್ದ ರೇಖಾ ಪಾತ್ರಾ ಅವರನ್ನು ಈ ಬಾರಿ ಹಿಂಗಲ್‌ಗಂಜ್‌ನಿಂದ ಕಣಕ್ಕಿಳಿಸಲಾಗಿದೆ.

ಎರಡನೇ ಪಟ್ಟಿಯ ಇತರ ಪ್ರಮುಖರು

ಮೇನಗುರಿ: ಕೌಶಿಕ್ ರಾಯ್
ಡಾರ್ಜಿಲಿಂಗ್: ನೋಮನ್ ರಾಯ್
ರಾಣಾಘಾಟ್ ದಕ್ಷಿಣ: ಆಶಿಮ್ ಕುಮಾರ್ ಬಿಸ್ವಾಸ್
ಗೈಘಾಟಾ: ಸುಬ್ರತಾ ಠಾಕೂರ್
ನೊಪರಾ: ಅರ್ಜುನ್ ಸಿಂಗ್
ಈಗ್ರಾ: ದಿಬ್ಯೇಂದು ಅಧಿಕಾರಿ (ಸುವೇಂದು ಅಧಿಕಾರಿ ಅವರ ಸಹೋದರ)
ಟಾಲಿಗಂಜ್: ಪಪಿಯಾ ಡೇ ಅಧಿಕಾರಿ
ಎಂಟಲ್ಲಿ: ಪ್ರಿಯಾಂಕಾ ತಿಬ್ರೆವಾಲ್
ಮಾಣಿಕ್ಯತಲಾ: ತಪಸ್ ರಾಯ್
ಪುರುಲಿಯಾ: ಸುದೀಪ್ ಕುಮಾರ್ ಮುಖರ್ಜಿ
ಬಿಜೆಪಿ ಈಗಾಗಲೇ ತನ್ನ ಮೊದಲ ಪಟ್ಟಿಯಲ್ಲಿ ಉತ್ತರ ಬಂಗಾಳ, ದಕ್ಷಿಣ ಬಂಗಾಳದ ಆಯಕಟ್ಟಿನ ಭಾಗಗಳು ಮತ್ತು ಪಶ್ಚಿಮ ಜಿಲ್ಲೆಗಳು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 144 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಪಟ್ಟಿಯು ಕೇವಲ ಹೆಸರಾಂತ ರಾಜಕೀಯ ವ್ಯಕ್ತಿಗಳಿಗೆ ಸೀಮಿತವಾಗಿಲ್ಲ; ಬದಲಾಗಿ ಪಕ್ಷದ ತಳಮಟ್ಟದ ಸಂಘಟನೆಯಲ್ಲಿ ಸಕ್ರಿಯರಾಗಿರುವ ಸಾಮಾನ್ಯ ಕಾರ್ಯಕರ್ತರು ಮತ್ತು ಜಿಲ್ಲಾ ಮಟ್ಟದ ಸ್ಥಳೀಯ ನಾಯಕರಿಗೂ ಆದ್ಯತೆ ನೀಡಲಾಗಿದೆ.
ಮೊದಲ ಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದು, ಬಿಷ್ಣುಪುರ ಸ್ಥಾನದಿಂದ ಈಗ ವಿಶ್ವಜಿತ್ ಖಾನ್ ಮತ್ತು ಜಾಯ್‌ಪುರದಿಂದ ಬಿಸ್ವಜಿತ್ ಮಹತೋ ಅವರನ್ನು ಕಣಕ್ಕಿಳಿಸಿದೆ. ಈ ಚುನಾವಣೆಯ ಅತಿ ದೊಡ್ಡ ಆಕರ್ಷಣೆಯೆಂದರೆ ಸುವೇಂದು ಅಧಿಕಾರಿ ಅವರ ಸ್ಪರ್ಧೆ. ಸುವೇಂದು. ಭವಾನಿಪುರ ಮತ್ತು ನಂದಿಗ್ರಾಮ್ ಎಂಬ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net