ರಾಹುಲ್ ಗಾಂಧಿ ಅನೇಕ ವರ್ಷಗಳಿಂದ ಚುನಾಯಿತ ಪ್ರತಿನಿಧಿಯಾಗಿ ಸಾರ್ವಜನಿಕ ಜೀವನದಲ್ಲಿದ್ದರೂ, ಅವರ ಅಂತರರಾಷ್ಟ್ರೀಯ ಭೇಟಿಗಳ ವೆಚ್ಚದ ವಿವರಗಳನ್ನು ಇದುವರೆಗೆ ಏಕೆ ಬಹಿರಂಗಪಡಿಸಿಲ್ಲ ಎಂದು ಪ್ರಶ್ನಿಸಿರುವ ಪಾತ್ರಾ, ಪ್ರತಿಯೊಂದು ವಿದೇಶಿ ಪ್ರವಾಸದ ಸಂದರ್ಭದಲ್ಲೂ ರಾಹುಲ್ ಜೊತೆಯಲ್ಲಿ ಕನಿಷ್ಠ ಮೂರರಿಂದ ನಾಲ್ಕು ವ್ಯಕ್ತಿಗಳು ಇರುತ್ತಿದ್ದರು ಎಂಬ ಅಂಶವನ್ನು ಸಹ ಪ್ರಸ್ತಾಪಿಸಿದರು. 2013-14 ರಿಂದ 2022-23 ರವರೆಗಿನ ಅಂಕಿಅಂಶಗಳನ್ನು ಉಲ್ಲೇಖಿಸಿದ ಬಿಜೆಪಿ ನಾಯಕ, ಈ ಹತ್ತು ವರ್ಷಗಳಲ್ಲಿ ರಾಹುಲ್ ಗಾಂಧಿ ಘೋಷಿತ ಆದಾಯ ಸುಮಾರು 11 ಕೋಟಿ ರೂಪಾಯಿಗಳಷ್ಟಿತ್ತು, ಆದರೆ ವಿದೇಶ ಪ್ರವಾಸದ ಖರ್ಚು ಮಾತ್ರ 60 ಕೋಟಿ ರೂಪಾಯಿಗಳನ್ನು ದಾಟಿದೆ ಎಂದು ವಿವರಿಸಿದರು.