ಅ.16ರಂದು ರಾಜ್ಯಸಭಾ ಚುನಾವಣೆ; ಮಾಜಿ TMC ಸಂಸದೆ ಕೋಯೆಲ್ ಮಲಿಕ್, ಉತ್ತರಾಖಂಡದಿಂದ ದಿನೇಶ್ ಆರ್ಯಗೆ BJP ಟಿಕೆಟ್!

ಅ.16ರಂದು ರಾಜ್ಯಸಭಾ ಚುನಾವಣೆ; ಮಾಜಿ TMC ಸಂಸದೆ ಕೋಯೆಲ್ ಮಲಿಕ್, ಉತ್ತರಾಖಂಡದಿಂದ ದಿನೇಶ್ ಆರ್ಯಗೆ BJP ಟಿಕೆಟ್!
Published on: 
  • ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿ ಬಿಜೆಪಿ

  • ಪಶ್ಚಿಮ ಬಂಗಾಳದಿಂದ ಕೋಯೆಲ್ ಮಲಿಕ್, ಉತ್ತರಾಖಂಡದಿಂದ ದಿನೇಶ್ ಆರ್ಯಗೆ ಟಿಕೆಟ್

  • ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳದ ಒಟ್ಟು 12 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ

ನವದೆಹಲಿ: ಅಕ್ಟೋಬರ್​ 16ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಅಧಿಕೃತವಾಗಿ ಭಾನುವಾರ ಪ್ರಕಟಿಸಿದೆ. ಇತ್ತೀಚೆಗೆ ಟಿಎಂಸಿಯಿಂದ ಪಕ್ಷಾಂತರಗೊಂಡಿದ್ದ ಕೋಯೆಲ್ ಮಲಿಕ್ ಹಾಗೂ ಉತ್ತರಾಖಂಡದಿಂದ ದಿನೇಶ್ ಆರ್ಯ ಅವರನ್ನು ಅಖಾಡಕ್ಕಿಳಿಸಲಾಗಿದೆ.

ಈ ಚುನಾವಣೆಯು ಉತ್ತರ ಪ್ರದೇಶದ 10 ಸ್ಥಾನಗಳು ಮತ್ತು ಉತ್ತರಾಖಂಡದ 1 ಸ್ಥಾನವನ್ನು ಒಳಗೊಂಡಿದ್ದು, ಅಕ್ಟೋಬರ್ 16ರಂದು ಚುನಾವಣೆ ನಡೆಯಲಿದೆ. ಆ ಬೆನ್ನಲ್ಲೇ ಬಿಜೆಪಿ ಕೇಂದ್ರಿಯ ಸಮಿತಿಯು ಈ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದೆ. ಇನ್ನೂ ಹತ್ತು ರಾಜ್ಯಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಇನ್ನಷ್ಟೇ ಅಧಿಕೃತವಾಗಿ ಪ್ರಕಟಿಸಬೇಕಿದೆ.

ಅ.16ರಂದು ಚುನಾವಣೆ

ಹಾಲಿ ಸದಸ್ಯರ ಅಧಿಕೃತ ಅವಧಿಯು ನವೆಂಬರ್ 25ಕ್ಕೆ ಕೊನೆಗೊಳ್ಳಲಿದೆ. ಜೊತೆಗೆ ಕೋಯೆಲ್ ಮಲಿಕ್ ಅವರು ಇತ್ತೀಚೆಗೆ ಟಿಎಂಸಿಯಿಂದ ಹೊರ ಬಂದ ಕಾರಣ ತೆರವಾಗಿರುವ ಅವರ ಸ್ಥಾನಕ್ಕೂ ಚುನಾವಣೆ ನಡೆಯಲಿದೆ. ಅಕ್ಟೋಬರ್​ 16ರಂದು ರಾಜ್ಯಸಭಾ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಅಕ್ಟೋಬರ್ 6 ಕೊನೆಯ ದಿನ.

ಬಿಜೆಪಿಗೆ ಪಕ್ಷಾಂತರ

ಕೋಯೆಲ್ ಮಲಿಕ್ ಅವರು ನಟಿ, ರಾಜಕಾರಿಣಿ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಹೀನಾಯವಾಗಿ ಸೋಲು ಕಂಡ ಬೆನ್ನಲ್ಲೇ ಹಲವು ನಾಯಕರು ಟಿಎಂಸಿ ತೊರೆಯುವ ಮೂಲಕ ಮಮತಾ ಬ್ಯಾನರ್ಜಿಗೆ ಶಾಕಿಂಗ್​ ನ್ಯೂಸ್​ ಕೊಟ್ಟಿದ್ದರು. ಅವರ ಪಟ್ಟಿಯಲ್ಲಿ ಕೋಯೆಲ್ ಮಲಿಕ್ ಕೂಡ ಒಬ್ಬರು.

ಜುಲೈ 16 ರಂದು ತಮ್ಮ ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಟಿಎಂಸಿಯನ್ನು ತೊರೆದರು. ನಂತರ ಬಿಜೆಪಿಗೆ ಸೇರ್ಪಡೆಗೊಂಡರು. ಇದರಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ಏರ್ಪಟ್ಟಿದೆ. ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತವನ್ನು ಹೊಂದಿದೆ. ಉತ್ತರಖಂಡದಲ್ಲಿ ಬಿಜೆಪಿ ಸಂಸದ ನರೇಶ್ ಬನ್ಸಾಲ್ ಅವರ ಅವಧಿ ಮುಗಿಯಲಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಯುತ್ತಿದೆ.

ಯಾರು ಈ ಕೋಯೆಲ್ ಮಲಿಕ್?

ಕೋಯೆಲ್​ ಮಲಿಕ್(ರುಕ್ಮಿಣಿ ಮಲಿಕ್​) ಬಂಗಾಳಿ ನಟಿ. ರುಕ್ಮಿಣಿ ಮಲಿಕ್ ಎನ್ನುವುದು ಅವರ ಮೂಲ ಹೆಸರು. ಕೋಯೆಲ್ ಅವರ ತಂದೆ ಹಿರಿಯ ನಟ ರಂಜಿತ್​ ಮಲಿಕ್ ಹಾಗೂ ಅವರ ತಾಯಿ ದೀಪಾ ಮಲಿಕ್​. 2013ರಿಂದ ರುಕ್ಮಿಣಿ ಅವರು ಸಿನಿಮಾ ತೊರೆದು ರಾಜಕಾರಿಣಿಯಾಗಿ ಗುರುತಿಸಿಕೊಂಡರು, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net