ಈ ಕುರಿತು ಹೈದರಾಬಾದ್ನಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿಗೆ ಬಿಆರ್‌ಎಸ್ ಸೇರಿದಂತೆ ಎಲ್ಲಾ ಪಕ್ಷಗಳಿಂದ ರಾಜಕೀಯ ಬೆಂಬಲವಿದೆ. ಆದರೆ ಬಿಜೆಪಿಯ ರಾಜಕೀಯ ತಂತ್ರವು ಅದು ಅಂಗೀಕಾರವಾಗದಂತೆ ನೋಡಿಕೊಂಡಿತು. ಅದು ಉದ್ದೇಶಪೂರ್ವಕವಾಗಿ ಮಸೂದೆಯನ್ನು ಕ್ಷೇತ್ರ ಪುನರ್ವಿಂಗಡಣೆ ಜೊತೆ ಸೇರಿಸಿ ತಪ್ಪಿಸಬಹುದಾದ ಅಡೆತಡೆಗಳನ್ನು ಸೃಷ್ಟಿಸಿ ಮಹಿಳೆಯರಿಗೆ ಸಿಗಬೇಕಾದ ಪ್ರಾತಿನಿಧ್ಯವನ್ನು ಸಿಗದಂತೆ ಮಾಡಿತು ಎಂದು ಕಿಡಿಕಾರಿದ್ದಾರೆ.