ಭವಾನಿಪುರ ಕ್ಷೇತ್ರದಿಂದ ಸುವೇಂದು ಅಧಿಕಾರಿ ವಿರುದ್ಧದ ತಮ್ಮ ಸ್ಪರ್ಧೆಯನ್ನು ತಪ್ಪಿಸಲು ಬಿಜೆಪಿ ಎರಡು ಸುಳ್ಳು ಪ್ರಕರಣಗಳನ್ನು ದಾಖಲಿಸಿದೆ ಆರೋಪಿಸಿರುವ ಮಮತಾ ಬ್ಯಾನರ್ಜಿ, ಬಿಜೆಪಿ ಇಂತಹ ಕುತಂತ್ರಗಳನ್ನು ಮಾಡುತ್ತಿದ್ದರೂ, ಟಿಎಂಸಿ ಕಾರ್ಯಕರ್ತರು ಅದನ್ನು ವಿಫಲಗೊಳಿಸಿದ್ದಾರೆ ಎಂದರು. ಇವಿಎಂ ಯಂತ್ರಗಳ ಎಣಿಕೆಯಲ್ಲಿ ತಾರತಮ್ಯ ಮಾಡುವ ಸಾಧ್ಯತೆಯಿದೆ ಎಂದು ಸಂಶಯ ವ್ಯಕ್ತಪಡಿಸುತ್ತಾ, ಬಿಜೆಪಿಗೆ ಅನುಕೂಲಕರವಾದ ಕ್ಷೇತ್ರಗಳ ಫಲಿತಾಂಶಗಳನ್ನು ಮೊದಲು ಘೋಷಿಸಿ, ಟಿಎಂಸಿ ಮುನ್ನಡೆ ಸಾಧಿಸುವ ಕ್ಷೇತ್ರಗಳ ಫಲಿತಾಂಶಗಳನ್ನು ವಿಳಂಬ ಮಾಡುವ ಸಾಧ್ಯತೆಯಿದೆ. ಮತದಾರರು ಇವಿಎಂಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ ನೀಡಿದರು(ಏಜೆನ್ಸೀಸ್).