ಬಿಜೆಪಿ-ಕಾಂಗ್ರೆಸ್ ಮೈತ್ರಿ! ಅಧಿಕಾರಕ್ಕಾಗಿ ಅಪರೂಪದ ಮೈತ್ರಿ..BJP-Congress alliance
BJP-Congress alliance
Published on:
Copied
Follow Us
ರಾಜ್ಯ ರಾಜಕಾರಣದಲ್ಲಿ ಕಿತ್ತಾಡುವ ಬಿಜೆಪಿ ಮತ್ತು ಕಾಂಗ್ರೆಸ್, ಇಲ್ಲಿ ಶಿವಸೇನೆಯನ್ನು ಅಧಿಕಾರದಿಂದ ಕೆಳಗಿಳಿಸಲು ಪರಸ್ಪರ ಕೈಜೋಡಿಸಿದ್ದಾರೆ. ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಒಮ್ಮತಕ್ಕೆ ಬಂದಿದ್ದು, ಹೊಸ ಮೈತ್ರಿಕೂಟವನ್ನು ರಚಿಸಿಕೊಂಡಿದ್ದಾರೆ.
ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಯ ಭದ್ರಕೋಟೆಯಾಗಿದ್ದ ಅಂಬರನಾಥ್‌ನಲ್ಲಿ ಅಧಿಕಾರ ಹಂಚಿಕೆಯ ಸಮೀಕರಣವೇ ಬದಲಾಗಿದೆ.ಈ ಮೈತ್ರಿಕೂಟವು ಬಿಜೆಪಿಯ ತೇಜಶ್ರೀ ಕರಂಜುಲೆ ಮೇಯರ್ ಹುದ್ದೆಯನ್ನು ಅಲಂಕರಿಸಲು ಸಹಾಯ ಮಾಡಿದೆ.
60 ಸದಸ್ಯರ ಬಲದ ಅಂಬರನಾಥ್ ನಗರಸಭೆಯಲ್ಲಿ ಬಹುಮತಕ್ಕೆ 31 ಸದಸ್ಯರ ಬೆಂಬಲ ಬೇಕಿತ್ತು. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಶಿವಸೇನೆಗೆ (ಶಿಂದೆ ಬಣ) ಬಹುಮತ ಸಿಕ್ಕಿರಲಿಲ್ಲ. ಈ ಸಂದರ್ಭವನ್ನು ಬಳಸಿಕೊಂಡ ಬಿಜೆಪಿ (14 ಸದಸ್ಯರು) ಮತ್ತು ಕಾಂಗ್ರೆಸ್ (12 ಸದಸ್ಯರು), ಎನ್‌ಸಿಪಿ ಹಾಗೂ ಪಕ್ಷೇತರರ ನೆರವಿನೊಂದಿಗೆ ಮ್ಯಾಜಿಕ್ ನಂಬರ್ ತಲುಪಿವೆ. ಈ ಮೈತ್ರಿಕೂಟವು ನಗರಸಭೆಯಲ್ಲಿ ಸ್ಪಷ್ಟ ಬಹುಮತವನ್ನು ಗಳಿಸಲು ಸಹಾಯ ಮಾಡಿದೆ. ಈ ಮೈತ್ರಿಯ ಫಲವಾಗಿ ಬಿಜೆಪಿಯ ತೇಜಶ್ರೀ ಕಾರಂಜುಲೆ ಪಾಟೀಲ್ ಅವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.
ಸ್ಥಳೀಯ ಮಟ್ಟದಲ್ಲಿ ಸಂಚಲನ:
ರಾಜ್ಯದಲ್ಲಿ ಶಿವಸೇನೆ-ಬಿಜೆಪಿ ಮೈತ್ರಿ ಸರ್ಕಾರವಿದ್ದರೂ, ಸ್ಥಳೀಯ ಮಟ್ಟದಲ್ಲಿ ಬಿಜೆಪಿಯು ಕಾಂಗ್ರೆಸ್ ಜೊತೆ ಸೇರಿ ತನ್ನದೇ ಮಿತ್ರಪಕ್ಷವನ್ನು ಸೋಲಿಸಿರುವುದು ಮಹಾರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಈ ಬೆಳವಣಿಗೆಯು ಮುಂಬರುವ ಇತರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬ ಕುತೂಹಲ ಮೂಡಿಸಿದೆ.
ಅಂಬರ್ನಾಥ್ ಪುರಸಭೆಯಲ್ಲಿ ಬಿಜೆಪಿ-ಕಾಂಗ್ರೆಸ್ ಮೈತ್ರಿಕೂಟವು ಮಹಾರಾಷ್ಟ್ರದ ರಾಜಕೀಯದಲ್ಲಿ ಉದ್ವಿಗ್ನತೆಯನ್ನು ಹುಟ್ಟುಹಾಕಿದೆ. ಮೈತ್ರಿಕೂಟವು ರಾಜಕೀಯ ಅಗತ್ಯವನ್ನು ಪ್ರತಿನಿಧಿಸುತ್ತದೆಯೇ ಅಥವಾ ವಿವಾದಾತ್ಮಕತೆ ಹಾದಿಯಲ್ಲಿ ಚರ್ಚೆಯಾಗಲಿದ್ಯಾ ಎನ್ನುವ ಮಾತು ಕೇಳಿ ಬರುತ್ತಿದೆ.