ಈ ಬಾರಿ ಮುಂಬೈ ಮೇಯರ್ ಹುದ್ದೆ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿ ಅನುಭವಿ ಮಹಿಳಾ ನಾಯಕಿಯನ್ನು ಪರಿಗಣಿಸಿದೆ. ಘಾಟ್ಕೋಪರ್ ವಾರ್ಡ್ನಿಂದ ಮೂರು ಬಾರಿ ಗೆದ್ದಿರುವ ರಿತು ತಾವ್ಡೆ, ಈ ಹಿಂದೆ ಬಿಎಂಸಿಯ ಶಿಕ್ಷಣ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆ ಅನುಭವದಲ್ಲಿ ಅವರನ್ನು ಮೇಯರ್ ಹುದ್ದೆಗೆ ಹೈಕಮಾಂಡ್ ಪರಿಗಣಿಸಲಾಗಿದೆ. ಅವರು ಮೇಯರ್ ಆಗಿ ಆಯ್ಕೆಯಾದರೇ 1982-83ರ ಅವಧಿಯ ಪ್ರಭಾಕರ್ ಪೈ ಬಳಿಕ ಮುಂಬೈ ಪಾಲಿಕೆಯಲ್ಲಿ ಎರಡನೇ ಬಿಜೆಪಿ ಮೇಯರ್ ಆಗಿ ಅಧಿಕಾರ ನಡೆಸಲಿದ್ದಾರೆ.