ಯಾರು ನೀವು? ಮಗಳ ಫೋಟೋ ತೆಗೆದಿದ್ದಕ್ಕೆ ಕ್ಲಾಸ್ ತಗೊಂಡ ನಟಿ ಬಿಪಾಶಾ ಬಸು..Bipasha Basu

Bipasha Basu
Bipasha Basu
Published on
ಮುಂಬೈ: ಬಾಲಿವುಡ್ ನಟಿ ಬಿಪಾಶಾ ಬಸು ( Bipasha Basu ) ಇತ್ತೀಚೆಗೆ ಮುಂಬೈನ ಬಾಂದ್ರಾದಲ್ಲಿ ತಮ್ಮ ಪತಿ ಕರಣ್ ಸಿಂಗ್ ಗ್ರೋವರ್ ಮತ್ತು ಪುತ್ರಿ ದೇವಿಯೊಂದಿಗೆ ಕಾಣಿಸಿಕೊಂಡಾಗ ನಡೆದ ಘಟನೆಯೊಂದು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ಸುದ್ದಿಯಾಗಿದೆ.
ಬಿಪಾಶಾ ಬಸು ತನ್ನ ಮಗಳೊಂದಿಗೆ ಕಾರಿನಿಂದ ಇಳಿಯುತ್ತಿದ್ದಾಗ, ಫೋಟೋಗ್ರಾಫರ್‌ಗಳು (ಪಾಪರಾಜಿಗಳು) ಮಗಳ ಫೋಟೋ ತೆಗೆಯಲು ಪ್ರಯತ್ನಿಸಿದರು. ಇದರಿಂದ ಅಸಮಾಧಾನಗೊಂಡ ಬಿಪಾಶಾ ತಕ್ಷಣ ಮಗಳ ಮುಖವನ್ನು ಕೈಯಿಂದ ಮರೆಮಾಚಿದರು.
ಫೋಟೋ ತೆಗೆಯುತ್ತಿದ್ದ ಒಬ್ಬ ಫೋಟೋಗ್ರಾಫರ್ ಮೇಲೆ ಸಿಟ್ಟಾದ ನಟಿ, "ಕೌನ್ ಹೋ ಆಪ್?" ನೀವು ಯಾರು? ಎಂದು ಗದರಿಸಿದ್ದಾರೆ. ಮಗಳ ಖಾಸಗಿತನಕ್ಕೆ ಧಕ್ಕೆ ಬರುತ್ತಿರುವುದಕ್ಕೆ ಅವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಪಾಶಾ ಅವರ ವರ್ತನೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಕೆಲವರು ಮಕ್ಕಳ ಖಾಸಗಿತನ ಕಾಪಾಡುವ ಅವರ ನಿರ್ಧಾರವನ್ನು ಬೆಂಬಲಿಸಿದರೆ, ಇನ್ನು ಕೆಲವರು ಅವರ ಸಿಟ್ಟಿನ ಬಗ್ಗೆ ಮಾತನಾಡುತ್ತಿದ್ದಾರೆ.
ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ 2022 ರಲ್ಲಿ ಮಗಳು ದೇವಿಯನ್ನು ಸ್ವಾಗತಿಸಿದ್ದರು. ನಟಿ ಆಗಾಗ ಮಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರಾದರೂ, ಸಾರ್ವಜನಿಕವಾಗಿ ಪಾಪರಾಜಿಗಳು ಅನುಮತಿಯಿಲ್ಲದೆ ಫೋಟೋ ತೆಗೆಯುವುದನ್ನು ಅವರು ಇಷ್ಟಪಡುವುದಿಲ್ಲ. ಸೆಲೆಬ್ರಿಟಿಗಳ ಮಕ್ಕಳ ಖಾಸಗಿತನ ಮತ್ತು ಪಾಪರಾಜಿಗಳ ಅತಿಯಾದ ಹಸ್ತಕ್ಷೇಪದ ನಡುವಿನ ಸಂಘರ್ಷ ಈ ಸುದ್ದಿಯ ಪ್ರಮುಖ ಅಂಶವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net