ನಾವು ಕಂಪ್ಯೂಟರ್‌ ಕೊಟ್ಟರೆ ಅವರು ಪಿಸ್ತೂಲ್​ ಕೊಡುತ್ತಿದ್ದಾರೆ: ಪ್ರಧಾನಿ ಮೋದಿ |

Narendra Modi | ಪ್ರಧಾನಿ ನರೇಂದ್ರ ಮೋದಿ
Narendra Modi | ಪ್ರಧಾನಿ ನರೇಂದ್ರ ಮೋದಿ
Published on
Patna: ಎನ್‌ಡಿಎ ಸರ್ಕಾರ ರಾಜ್ಯದ ಯುವಕರ ಕೈಗೆ ಕಂಪ್ಯೂಟರ್‌ ಮತ್ತು ಕ್ರೀಡಾ ಸಾಮಗ್ರಿಗಳನ್ನು ಒದಗಿಸುತ್ತಿದ್ದರೆ, ಇತ್ತ ಆರ್‌ಜೆಡಿ ಅವರಿಗೆ ಪಿಸ್ತೂಲ್​​ಗಳನ್ನು ನೀಡುವ ಬಗ್ಗೆ ಮಾತನಾಡುತ್ತಾ ಗೂಂಡಾಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಶನಿವಾರ ಸೀತಾಮರ್ಹಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಿಪಕ್ಷ ನಾಯಕರುಗಳು ತಮ್ಮ ಮಕ್ಕಳನ್ನು ಮುಖ್ಯಮಂತ್ರಿ, ಮಂತ್ರಿಗಳು, ಸಂಸದರು ಮತ್ತು ಶಾಸಕರನ್ನಾಗಿ ಮಾಡಲು ಇಚ್ಛೆ ಪಡುತ್ತಾರೆ, ಇತ್ತ ನಿಮ್ಮ ಮಕ್ಕಳಿಗೆ ಗೂಂಡಾಗಳನ್ನು ಮಾಡಲು ಬಯಸುತ್ತಾರೆ. ಬಿಹಾರ ಇದನ್ನು ಒಪ್ಪಿಕೊಳ್ಳುವುದಿಲ್ಲ. ರಾಜ್ಯದಲ್ಲಿ ಮತ್ತೆ ಪಿಸ್ತೂಲುಗಳು, ಕ್ರೌರ್ಯ, ಭ್ರಷ್ಟಾಚಾರ ಮತ್ತು ದ್ವೇಷದ ಆಳ್ವಿಕೆ ನಡೆಯದಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆ ನೀಡಿದರು.
ಆರ್‌ಜೆಡಿಯ ಪ್ರಚಾರ ಗೀತೆಗಳು ಮತ್ತು ಘೋಷಣೆಗಳನ್ನು ಕೇಳಿದರೆ ಜನ ನಡುಗುತ್ತಾರೆ. ಬಿಹಾರದ ಮಕ್ಕಳಿಗಾಗಿ ಆರ್‌ಜೆಡಿಯ ಕಲ್ಪನೆ ಏನು ಎನ್ನುವುದು ಆ ಪಕ್ಷದ ನಾಯಕರ ಚುನಾವಣಾ ಪ್ರಚಾರಂದಿದಲೇ ಸ್ಪಷ್ಟವಾಗುತ್ತಿದೆ. ಆರ್‌ಜೆಡಿ ಅಭ್ಯರ್ಥಿಯ ಸಮ್ಮುಖದಲ್ಲಿ ಚುನಾವಣಾ ಪ್ರಚಾರದ ವೇದಿಕೆಯ ಮೇಲೆ 10 ವರ್ಷದ ಬಾಲಕನೊಬ್ಬ ಪಿಸ್ತೂಲುಗಳು ಮತ್ತು ರಂಗದಾರಿ ಬಗ್ಗೆ ಮಾತನಾಡುತ್ತಿರುವ ವಿಡಿಯೋವನ್ನು ಮೋದಿ ಈ ಸಂದರ್ಭದಲ್ಲಿ ಉಲ್ಲೇಖಿಸಿದರು.
ಬಿಹಾರಕ್ಕೆ ಈಗ ಬೇಕಾಗಿರುವುದು ನವೋದ್ಯಮಗಳ ಕನಸುಗಾರರು ಎಂದ ಮೋದಿ, "ನಯಿ ಚಾಹಿಯೇ ಕಟ್ಟಾ ಸರ್ಕಾರ, ಫಿರ್ ಏಕ್ ಬಾರ್ ಎನ್ಡಿಎ ಸರ್ಕಾರ್ (ನಮಗೆ ಬಂದೂಕು ಹಿಡಿದ ಸರ್ಕಾರ ಬೇಡ, ಮತ್ತೊಮ್ಮೆ ಎನ್​​ಡಿಎ ಸರ್ಕಾರ) ಎಂಬ ಹೊಸ ಘೋಷಣೆಯನ್ನು ಈ ವೇಳೆ ಪರಿಚಯಿಸಿದರು.
ಜಂಗಲ್ ರಾಜ್ ಎಂದರೆ ಕಟ್ಟಾ, ಕ್ರೂರ್ತ, ಕಟುಟ, ಕುಸಂಸ್ಕರ್ ಮತ್ತು ಭ್ರಷ್ಟಾಚಾರ. ವಿಪಕ್ಷದ ನಾಯಕರು ಕೆಟ್ಟ ಮೌಲ್ಯಗಳನ್ನು ಹೊಂದಿದ್ದು, ಅದೇ ರೀತಿಯ ಆಡಳಿತ ನೀಡಬೇಕು ಎಂಬ ಆಲೋಚನೆಯಲ್ಲಿದ್ದಾರೆ, ಈ ಹಿಂದೆ ಜಂಗಲ್​ ರಾಜ್​ ಆಳ್ವಿಕೆ ಬಂದ ತಕ್ಷಣ, ಬಿಹಾರದ ಪತನದ ಯುಗ ಪ್ರಾರಂಭವಾಯಿತು. ಆರ್‌ಜೆಡಿ ಬಿಹಾರದಲ್ಲಿ ಎಲ್ಲಾ ಅಭಿವೃದ್ಧಿಯನ್ನು ಕೊನೆಗೊಳಿಸಿತು. ಈಗ ಅವರಾಡುವ ಎಲ್ಲ ಅಭಿವೃದ್ಧಿಯ ಮಾತುಗಳು ಹಸಿ ಸುಳ್ಳು ಎಂದರು.
ನವೆಂಬರ್ 6 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಹೆಚ್ಚಾದ ಮತದಾನ ಪ್ರಮಾಣದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಪ್ರಧಾನಿ, ನೀವು ಮನೆಯಿಂದ ಹೊರಗೆ ಬಂದು ಮತದಾನ ಮಾಡುವ ಮೂಲಕ ಪ್ರತಿಪಕ್ಷಗಳಿಗೆ ದೊಡ್ಡ ಆಘಾತ ನೀಡಿದ್ದೀರಿ. ಅವರಿಗೆ ರಾತ್ರಿ ನಿದ್ದೆ ಬರುತ್ತಿಲ್ಲ ಎಂದರು.
ಬಿಹಾರ ಚುನಾವಣೆಯ ಅಂತಿಮ ಹಂತದ ಮತದಾನ ನವೆಂಬರ್ 11 ರಂದು ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶ ಹೊರಬೀಳಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net