ಬಿಹಾರ ಸಚಿವ ನಿತಿನ್ ನಬಿನ್ ಬಿಜೆಪಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನೇಮಕ; ಪ್ರಧಾನಿ ಮೋದಿ ಅಭಿನಂದನೆ | Nitin Nabin

ಬಿಜೆಪಿ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷ ನಿತಿನ್ ನಬಿನ್
ಬಿಜೆಪಿ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷ ನಿತಿನ್ ನಬಿನ್
Published on
ನವದೆಹಲಿ: ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಬಿಹಾರದ ಸಚಿವ ನಿತಿನ್ ನಬಿನ್(Nitin Nabin) ಅವರನ್ನು ನೇಮಿಸಲಾಗಿದ್ದು, 45ನೇ ವಯಸ್ಸಿನ ಅವರು ಬಿಜೆಪಿಯ ಅತ್ಯಂತ ಕಿರಿಯ ಮುಖ್ಯಸ್ಥ ಹುದ್ದೆಗೆ ಪೂರ್ವ ಭಾರತದಿಂದ ಬಂದ ಮೊದಲ ಮುಖಸ್ಥರಾಗಿದ್ದಾರೆ. ಪ್ರಧಾನಿ ಮೋದಿ ಸೇರಿ ಎಲ್ಲಾ ಬಿಜೆಪಿ ನಾಯಕರು ಅವರಿಗೆ ಅಭಿನಂದಿಸಿದ್ದಾರೆ.
ಪಕ್ಷದಲ್ಲಿ ಅನುಭವ ಮತ್ತು ಯುವಕರ ವಿಶಿಷ್ಟ ಮಿಶ್ರಣವನ್ನು ತರುವ ನಿರೀಕ್ಷೆಯಿಂದ ನಬಿನ್ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಐದು ಬಾರಿ ಶಾಸಕರಾಗಿ, ಪ್ರಮುಖ ಖಾತೆಗಳನ್ನು ನಿರ್ವಹಿಸಿ ಆಡಳಿತಾತ್ಮಕ ಅನುಭವ ಪಡೆದಿದ್ದಾರೆ. ಎರಡು ದಶಕಗಳ ಸಂಘಟನಾ ಅನುಭವ ಜೊತೆಗೆ ಕ್ಷದ ಯುವ ವಿಭಾಗದ ಮುಖ್ಯಸ್ಥರಿಂದ ಛತ್ತೀಸ್‌ಗಢದಲ್ಲಿ ಚುನಾವಣಾ ಉಸ್ತುವಾರಿಯಾಗಿ ಹುದ್ದೆಯನ್ನು ನಿಭಾಯಿಸಿದ್ದಾರೆ.
ನಬಿನ್ ಅವರು ಮುಂದೆ ಸಕಾಲದಲ್ಲಿ ನಡ್ಡಾ ಅವರ ಸ್ಥಾನಕ್ಕೆ ಬರುವ ನಿರೀಕ್ಷೆಯಿದ್ದು, ಈ ನೇಮಕಾತಿಯು ಬಿಜೆಪಿಯ ಸಮರ್ಥ ನಾಯಕತ್ವದತ್ತ ಗಮನ ಹರಿಸುವುದನ್ನು ಪ್ರತಿಬಿಂಬಿಸುತ್ತದೆ ಮತ್ತು ಪೀಳಿಗೆಯ ಬದಲಾವಣೆಯನ್ನು ಸೂಚಿಸುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ನೂತನ ಕಾರ್ಯಾಧ್ಯಕ್ಷರಿಗೆ ಪ್ರಧಾನಿ ಮೋದಿ ಅಭಿನಂದನೆ

ಬಿಜೆಪಿಯ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನೇಮಕವಾಗಿರುವ ಸಚಿವ ನಿತಿನ್ ಅವರಿಗೆ ಎಕ್ಸ್​ನಲ್ಲಿ ಪ್ರಧಾನಿ ಮೋದಿ ಅಭಿನಂದಿಸಿದ್ದು, ನಿತಿನ್ ನಬಿನ್ ಅವರನ್ನು ಯುವ ಮತ್ತು ಶ್ರಮಶೀಲ ಕಾರ್ಯಕರ್ತ ಮತ್ತು ಶ್ರೀಮಂತ ಸಾಂಸ್ಥಿಕ ಅನುಭವ ಹೊಂದಿರುವವರು ಎಂದು ಶ್ಲಾಘಿಸಿದ್ದಾರೆ.
ಬಿಹಾರದಲ್ಲಿ ಶಾಸಕರಾಗಿ ಮತ್ತು ಸಚಿವರಾಗಿ ಹಲವು ಅವಧಿಗೆ ಪ್ರಭಾವಶಾಲಿ ದಾಖಲೆಯನ್ನು ಹೊಂದಿದ್ದಾರೆ. ಅವರು ಜನರ ಆಕಾಂಕ್ಷೆಗಳನ್ನು ಪೂರೈಸಲು ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ತಮ್ಮ ವಿನಮ್ರ ಸ್ವಭಾವ ಮತ್ತು ನಿಷ್ಠುರ ಕಾರ್ಯ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಅವರ ಶಕ್ತಿ ಮತ್ತು ಸಮರ್ಪಣೆ ಮುಂದಿನ ದಿನಗಳಲ್ಲಿ ನಮ್ಮ ಪಕ್ಷವನ್ನು ಬಲಪಡಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾದ ಅವರಿಗೆ ಅಭಿನಂದನೆಗಳು ಎಂದು ಅಭಿನಂದಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net