2000 ಜುಲೈ 25ರಂದು ಮಧುಬನಿಯಲ್ಲಿ ಜನಿಸಿದ್ದ ಮೈಥಿಲಿ, ಬಳಿಕ ಆರ್ಥಿಕ ತೊಂದರೆಯಿಂದಾಗಿ ಕುಟುಂಬ ದೆಹಲಿಗೆ ಸ್ಥಳಾಂತರಗೊಂಡಿತ್ತು. ದೆಹಲಿಯ ನಜಾಫ್ಗಢದಲ್ಲಿ ಮೈಥಿಕ ಬೆಳೆದು ಶಿಕ್ಷಣ ಪೂರೈಸಿದ್ದಾರೆ. ಬಳಿಕ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಭಕ್ತಿ ಗೀತೆಯಲ್ಲಿ ತರಬೇತಿ ಪಡೆದು ಹೆಸರುವಾಸಿಯಾಗಿದ್ದಾರೆ. ಜಾನಪದ ಸಂಗೀತಕ್ಕೆ ಅವರು ನೀಡಿದ ಸೇವೆಗಾಗಿ, 2021ರಲ್ಲಿ ಸಂಗೀತ ನಾಟಕ ಅಕಾಡೆಮಿಯಿಂದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ (ಏಜೆನ್ಸೀಸ್).