ಬಿಹಾರ ಚುನಾವಣೆ: ರಾಘೋಪುರ ಕ್ಷೇತ್ರದಿಂದ ಕೊನೆಗೂ ಗೆದ್ದ ಆರ್​ಜೆಡಿಯ ತೇಜಸ್ವಿ ಯಾದವ್| Tejashwi Yadav

ಆರ್​ಜೆಡಿ ನಾಯಕ ತೇಜಸ್ವಿ ಯಾದವ್
ಆರ್​ಜೆಡಿ ನಾಯಕ ತೇಜಸ್ವಿ ಯಾದವ್
Published on

ಪ್ರಮುಖ ಮುಖ್ಯಾಂಶಗಳು

  • ಬಿಹಾರ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ ಭಾರಿ ಗೆಲುವು
  • ರಾಘೋಪುರ್ ಕ್ಷೇತ್ರದಿಂದ ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಗೆಲುವು
ಪಾಟ್ನಾ: ಬಿಹಾರ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ ಭಾರಿ ಬಹುಮತ ಪಡೆದು ಗೆಲುವು ಸಾಧಿಸಿದೆ. ಆದ್ರೆ ವಿಪಕ್ಷ ಇಂಡಿಯಾ ಮೈತ್ರಿಕೂಟದ ಸಿಎಂ ಅಭ್ಯರ್ಥಿ ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಅಂತಿಮವಾಗಿ ತಮ್ಮ ಕುಟುಂಬದ ಭದ್ರಕೋಟೆಯಾದ ರಾಘೋಪುರ್ ಕ್ಷೇತ್ರದಿಂದ 11,000 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ರಾಘೋಪುರ್ ಕ್ಷೇತ್ರವನ್ನು ಈ ಹಿಂದೆ ತೇಜಸ್ವಿ ಯಾದವ್ ಅವರ ತಂದೆ ಮತ್ತು ಆರ್‌ಜೆಡಿ ಸಂಸ್ಥಾಪಕ ಲಾಲು ಪ್ರಸಾದ್ ಯಾದವ್ ಮತ್ತು ತಾಯಿ ರಾಬ್ರಿ ದೇವಿ ಪ್ರತಿನಿಧಿಸಿದ್ದರು. 2015ರಿಂದ ತೇಜಸ್ವಿ ಯಾದವ್ ಈ ಕ್ಷೇತ್ರವನ್ನ ಪ್ರತಿನಿಧಿಸುತ್ತಿದ್ದಾರೆ.
2020ರ ಚುನಾವಣೆಯಲ್ಲಿ 38,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದ ತೇಜಸ್ವಿ ಯಾದವ್, ಈ ಭಾರಿ ಬಿಜೆಪಿ ಅಭ್ಯರ್ಥಿ ಸತೀಶ್ ಯಾದವ್ ಅವರ ಪ್ರಬಲ ಸ್ಪರ್ದೆ ನಡೆಯುವೆಯೂ ಹಾವು ಏಣಿಯಾಟದಲ್ಲಿ ಕೊನೆಗೆ 11 ಸಾವಿರ ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.
ಬಿಜೆಪಿ ಅಭ್ಯರ್ಥಿ ಸತೀಶ್ ಯಾದವ್ ಈ ಹಿಂದೆ 2010ರಲ್ಲಿ ತೇಜಸ್ವಿ ಯಾದವ್ ತಾಯಿ, ಬಿಹಾರದ ಮಾಜಿ ಸಿಎಂ ರಾಬ್ಡಿ ದೇವಿಯವರನ್ನು ಸೋಲಿಸಿದ್ದರು. 2015ರಲ್ಲಿ ತೇಜಸ್ವಿ ಯಾದವ್ ಮೊದಲಿಗೆ ಸ್ಪರ್ಧೆ ಮಾಡಿದ ಬಳಿಕ ಕ್ಷೇತ್ರದಲ್ಲಿ ಮತ್ತೆ ಕುಟುಂಬದ ಪಾರುಪತ್ಯ ಮುಂದುವರೆದಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net