Bihar Election | ಜೈಲಿನಿಂದಲೇ ಗೆಲುವು ಸಾಧಿಸಿದ ಜೆಡಿಯು ಅಭ್ಯರ್ಥಿ ಅನಂತ್ ಸಿಂಗ್

Bihar Election | ಜೆಡಿಯು ಅಭ್ಯರ್ಥಿ ಅನಂತ್ ಸಿಂಗ್
Bihar Election | ಜೆಡಿಯು ಅಭ್ಯರ್ಥಿ ಅನಂತ್ ಸಿಂಗ್
Published on
ಪಟನಾ: ಜನ ಸುರಾಜ್ ಪಕ್ಷದ ಕಾರ್ಯಕರ್ತನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್​ ವಶದಲ್ಲಿರುವ ಮೊಕಾಮಾ ಕ್ಷೇತ್ರದ ಜೆಡಿಯು ಅಭ್ಯರ್ಥಿ ಅನಂತ್ ಸಿಂಗ್, 28,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಅನಂತ್​ ಸಿಂಗ್ 91,416 ಮತ ಗಳಿಸಿದ್ದು, ಆರ್​ಜೆಡಿ ಅಭ್ಯರ್ಥಿ ವೀಣಾದೇವಿ 63,210 ಮತಗಳನ್ನು ಪಡೆದಿದ್ದಾರೆ.
ಜೈಲಿನಲ್ಲಿರುವ ಜೆಡಿ(ಯು) ನಾಯಕ ಸಿಂಗ್​, ಐದು ಬಾರಿ ಮೊಕಾಮಾ ಕ್ಷೇತ್ರದಿಮದ ಗೆಲುವು ಸಾಧಿಸಿದ್ದಾರೆ. 2005 ರಲ್ಲಿ ಜೆಡಿ(ಯು) ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದರು. ಐದು ವರ್ಷಗಳ ಬಳಿಕ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮಾತೃ ಪಕ್ಷವಾಗಿದ್ದ ಜೆಡಿ(ಯು) ಅಭ್ಯರ್ಥಿಯನ್ನೇ ಸೋಲಿಸಿದರು. 2020 ರ ಚುನಾವಣೆಗೆ ಮತ್ತೆ ಮನ ಬದಲಿಸಿದ ಸಿಂಗ್ ಆರ್‌ಜೆಡಿಗೆ ಸೇರ್ಪಡೆಗೊಂಡು ಗೆಲುವು ಸಾಧಿಸಿದರು.
ಅನಂತ್​ ಸಿಂಗ್ ವಿರುದ್ಧ 28 ಕ್ರಿಮಿನಲ್ ಪ್ರಕರಣಗಳಿದ್ದು, ಶಸ್ತ್ರಾಸ್ತ್ರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ ಕಾರಣ ತಮ್ಮ ಸ್ಥಾನ ಕಳೆದುಕೊಂಡ ಸಿಂಗ್​, ಉಪಚುನಾವಣೆಯಲ್ಲಿ ತಮ್ಮ ಪತ್ನಿ ನೀಲಂ ದೇವಿ ನಿಲ್ಲಿಸಿ ಮೊಕಾಮಾ ಕ್ಷೇತ್ರವನ್ನು ಉಳಿಸಿಕೊಂಡರು. ಇದೇ ನವೆಂಬರ್ 2 ರಂದು ಜನ್​ ಸುರಾಜ್​ ಪಕ್ಷದ ಕಾರ್ಯಕರ್ತ ದುಲಾರ್ ಸಿಂಗ್ ಯಾದವ್ ಕೊಲೆಗೆ ಸಂಬಂಧಿಸಿದಂತೆ ಅನಂತ್ ಸಿಂಗ್​​​ರನ್ನು ಬಂಧಿಸಲಾಗಿತ್ತು. ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾಗ ಯಾದವ್​ರನ್ನು ಗುಂಡು ಹಾರಿಸಿ ಮಾರಣಾಂತಿಕವಾಗಿ ಕೊಲ್ಲಲಾಯಿತು ಎಂದು ವರದಿಯಾಗಿದೆ.
ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರೆದಿದ್ದು, ಎನ್​​ಡಿಎ ಎಲ್ಲರ ನಿರೀಕ್ಷೆ ಮೀರಿ ಬಹುಮತ ಗಳಿಸುವತ್ತ ದಾಪುಗಾಲಿಡುತ್ತಿದ್ದು, ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯ ಬಗ್ಗೆ ಚರ್ಚೆ ಮುಂದುವರೆದಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net