ಬಿಹಾರ ವಿಧಾನಸಭಾ ಚುನಾವಣೆ: ಮತಎಣಿಕೆಯಲ್ಲಿ ಎನ್​ಡಿಎಗೆ ಭರ್ಜರಿ ಆರಂಭ, ಮಹಾಘಟ್​ಬಂಧನ್ ಪೈಪೋಟಿ! Bihar Assembly Election

ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ಮತ್ತು ಜೆಡಿಯು ನಾಯಕ ನಿತೀಶ್​ ಕುಮಾರ್​
ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ಮತ್ತು ಜೆಡಿಯು ನಾಯಕ ನಿತೀಶ್​ ಕುಮಾರ್​
Published on
ಪಟನಾ: ಇಡೀ ದೇಶದ ಗಮನ ಸೆಳೆದಿರುವ ಬಿಹಾರ ವಿಧಾನಸಭೆಯ ಚನಾವಣೆಯ ( Bihar Assembly Election ) ಮತಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಸೇರಿದಂತೆ ಆಡಳಿತಾರೂಢ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಆರಂಭಿಕ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಅಂಚೆ ಮತಎಣಿಕೆಯಲ್ಲಿ ಎನ್​ಡಿಎ ಮುನ್ನಡೆಯನ್ನು ಸಾಧಿಸಿದೆ. ಅಲ್ಲದೆ, ಮತಯಂತ್ರ ಎಣಿಕೆಯಲ್ಲಿ ಎನ್​ಡಿಎ 47 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಮಹಾಘಟ್​ಬಂಧನ್​ 31 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ. ಪ್ರಶಾಂತ್​ ಕಿಶೋರ್​ ಅವರ ಜನ ಸುರಾಜ್​ ಪಕ್ಷ ಕೇವಲ 2 ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ. ಮತಎಣಿಕೆಯ ಟ್ರೆಂಡ್​ ಕ್ಷಣ ಕ್ಷಣಕ್ಕೂ ಬದಲಾಗುತ್ತಿದೆ.
ಎಕ್ಸಿಟ್ ಪೋಲ್‌ಗಳ ಸಮೀಕ್ಷೆಯು ಎನ್‌ಡಿಎಗೆ ಸುಲಭ ಗೆಲುವು ಸೂಚಿಸಿವೆ. ಒಟ್ಟು 243 ವಿಧಾನಸಭಾ ಸ್ಥಾನಗಳಲ್ಲಿ 146 ಸ್ಥಾನಗಳನ್ನು ಎನ್​ಡಿಎ ಪಡೆಯಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಇದು ಬಹುಮತಕ್ಕಿಂತ 24 ಸ್ಥಾನಗಳು ಹೆಚ್ಚಿದೆ. ತೇಜಸ್ವಿ ಯಾದವ್ ಅವರ ಆರ್‌ಜೆಡಿ ನೇತೃತ್ವದ ವಿರೋಧ ಪಕ್ಷ 'ಮಹಾಘಟಬಂಧನ್' ಕೇವಲ 92 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಕಳೆದ ಚುನಾವಣೆಯಲ್ಲಿ 110 ಸ್ಥಾನಗಳನ್ನು ಗಳಿಸಿತ್ತು. ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜಾನ್ ಸುರಾಜ್ ತನ್ನ ಚುನಾವಣಾ ಚೊಚ್ಚಲ ಪ್ರವೇಶದಲ್ಲೇ ವಿಫಲವಾಗುವ ಸಾಧ್ಯತೆಯಿದ್ದು, ಕೇವಲ ಒಂದು ಸ್ಥಾನವನ್ನು ಮಾತ್ರ ಗೆಲ್ಲುತ್ತದೆ ಎಂದು ಸಮೀಕ್ಷೆಗಳು ತಿಳಿಸಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net