ಇತ್ತ ಶಿವಸೇನಾ (ಯುಬಿಟಿ) ನಾಯಕಿ ಸುಷ್ಮಾ ಅಂಧಾರೆ ಕೂಡ ಈ ಭೇಟಿಯ ಕುರಿತು ಮಾತನಾಡಿದ್ದು, ಇದು ಕಾಕತಾಳೀಯವಾಗಿದ್ದು, ಇದರಲ್ಲಿ ಯಾವುದೇ ವಿಶೇಷ ರಾಜಕೀಯ ಅರ್ಥವಿಲ್ಲ ಎಂದು ಅವರು ಹೇಳಿದ್ದಾರೆ. ಇಂಧನ ಉಳಿತಾಯ ಮತ್ತು ವಿಐಪಿಗಳು ಖಾಸಗಿ ಜೆಟ್‌ಗಳ ಬಳಕೆಯನ್ನು ಕಡಿಮೆ ಮಾಡುವ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆಯುತ್ತಿರುವಾಗ, ಸಾಮಾನ್ಯ ವಿಮಾನದ ಬಳಕೆಯನ್ನು ಅದೇ ನಿಟ್ಟಿನಲ್ಲಿ ನೋಡಬೇಕೇ ಹೊರತು ರಾಜಕೀಯ ಸಂಕೇತವಾಗಿ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನಾಗ್ಪುರ ಮುಖ್ಯಮಂತ್ರಿಯವರ ತವರೂರಾಗಿದ್ದು, ಉದ್ಧವ್ ಅವರ ಪ್ರವಾಸ ಮುಂಚಿತವಾಗಿಯೇ ನಿಗದಿಯಾಗಿತ್ತು ಎಂದು ಅವರು ತಿಳಿಸಿದ್ದಾರೆ. ಒಟ್ಟಾರೆಯಾಗಿ, ಮಹಾರಾಷ್ಟ್ರ ರಾಜಕೀಯದಲ್ಲಿ ಪಕ್ಷಾಂತರದ ಬಿಸಿ ಇರುವಾಗಲೇ ಕಡು ರಾಜಕೀಯ ವೈರಿಗಳು ಒಂದೇ ವಿಮಾನದಲ್ಲಿ ಮುಖಾಮುಖಿಯಾಗಿರುವುದು ಇಡೀ ರಾಜ್ಯದ ಗಮನ ಸೆಳೆದಿದೆ(ಏಜೆನ್ಸೀಸ್).