ಸೋನಮ್​ ಪತ್ನಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಕೋರ್ಟ್​; ಸೋನಮ್​ ವಾಂಗ್​ಚುಕ್​ರನ್ನು ಮೆದಾಂತ ಆಸ್ಪತ್ರೆಗೆ ಸ್ಥಳಾಂತರಿಸಲು ಸೂಚನೆ..Sonam Wangchuk

sonam wangchuk can be moved to medanta hospitalsays court
sonam wangchuk can be moved to medanta hospitalsays court
Published on

ಪ್ರಮುಖ ಮುಖ್ಯಾಂಶಗಳು

  • ಸೋನಮ್​ ವಾಂಗ್​ಚುಕ್​ರನ್ನು ಮೆದಾಂತ ಆಸ್ಪತ್ರೆಗೆ ವರ್ಗಾಯಿಸಿ ಎಂದ ದೆಹಲಿ ಹೈ ಕೋರ್ಟ್
  • ಸೋನಮ್​ ವಾಂಗ್​ಚುಕ್​ರ ಪತ್ನಿ ಗೀತಾಂಜಲಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಕೋರ್ಟ್​
  • ವಿಶೇಷ ವೈದ್ಯಕೀಯ ತಂಡ ರಚನೆಗೆ ಕೋರ್ಟ್​ ಆದೇಶ
Sonam Wangchuk can be moved to Medanta Hospitalsays Court: ದೆಹಲಿಯ ಜಂತರ್​​ ಮಂತರ್​ನಲ್ಲಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ಯ ಸೋನಮ್​ ವಾಂಗ್​ಚುಕ್​ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದ ಕಾರಣ, ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದೆಹಲಿ ಪೊಲೀಸರು ದಾಖಲಿಸಿದ್ದರು. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಗುರುಗ್ರಾಮದ ಮೆದಾಂತಆಸ್ಪತ್ರೆಗೆ ಸ್ಥಳಾಂತರಿಸುವಂತೆ ದೆಹಲಿ ಹೈ ಕೋರ್ಟ್​ ಅನುಮತಿ ನೀಡಿದೆ.
ದೀರ್ಘಾವಧಿಯ ಉಪವಾಸ ಸತ್ಯಾಗ್ರಹ ನಡೆಸಿದ ಪರಿಣಾಮ ಸೋನಮ್​ ಅವರ ಆರೋಗ್ಯ ಹದಗೆಟ್ಟಿರುವ ಕಾರಣ ಅವರನ್ನು ಮೆದಾಂತ ಆಸ್ಪತ್ರೆಗೆ ವರ್ಗಾಯಿಸುವಂತೆ ಕೋರಿ ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ದೆಹಲಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ವೈದ್ಯರ ಸಮಿತಿ ರಚನೆಗೆ ಸೂಚನೆ

ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಎಐಐಎಮ್‌ಎಸ್, ಸಫ್ದರ್‌ಜಂಗ್ ಆಸ್ಪತ್ರೆಯ ವೈದ್ಯರು ಹಾಗೂ ವಾಂಗ್ಚುಕ್ ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರ ವರದಿಗಳನ್ನು ಪರಿಶೀಲಿಸಿದ ನ್ಯಾಯಪೀಠ, ಅವರ ಆರೋಗ್ಯಕ್ಕೆ ಸತತ ವೈದ್ಯಕೀಯ ಮೇಲ್ವಿಚಾರಣೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತು.
ಅವರ ಆಯ್ಕೆಯಾದ ಮೆದಾಂತ ಆಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿ ನೀಡುತ್ತೇವೆ. ಅಲ್ಲಿನ ವೈದ್ಯರ ತಂಡ ಚಿಕಿತ್ಸೆ ನೀಡಲಿದೆ. ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಮಾಡಲಾದ ಎಲ್ಲಾ ಚಿಕಿತ್ಸಾ ವರದಿಗಳನ್ನು ತಕ್ಷಣವೇ ಮೆದಾಂತ ಆಸ್ಪತ್ರೆಗೆ ಹಸ್ತಾಂತರಿಸಬೇಕು. ಅಷ್ಟೇ ಅಲ್ಲದೆ, ಚಿಕಿತ್ಸೆಗಾಗಿ ವೈದ್ಯರ ವಿಶೇಷ ಸಮಿತಿಯನ್ನು ರಚಿಸಬೇಕು ಎಂದು ಕೋರ್ಟ್​ ತಾಕೀತು ಮಾಡಿದೆ

ಪ್ರತಿಭಟನಾ ಸ್ಥಳಕ್ಕೆ ಹೋಗದಂತೆ ಸೂಚನೆ ಕೊಡಿ

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಸೋನಮ್​ ವಾಂಗ್​ಚುಕ್​ ಅವರನ್ನು ಮೆದಾಂತ ಆಸ್ಪತ್ರೆಗೆ ಸ್ಥಳಾಂತರಿಸಲು ಸರ್ಕಾರಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ, ವೈದ್ಯರ ಸಲಹೆಗೆ ವಿರುದ್ಧವಾಗಿ ಅವರು ಡಿಸ್ಚಾರ್ಜ್ ಆಗಿ ಮತ್ತೆ ಪ್ರತಿಭಟನಾ ಸ್ಥಳಕ್ಕೆ ಹಿಂತಿರುಗದಂತೆ ಕೋರ್ಟ್ ಸೂಕ್ತ ಸೂಚನೆ ನೀಡಬೇಕೆಂದು ಮನವಿ ಮಾಡಿದರು.
ಧರ್ಮೇಂದ್ರ ಪ್ರಧಾನ್​ ಅವರ ರಾಜೀನಾಮೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಉಂಟಾಗಿರುವ ಲೋಪದೋಷವನ್ನು ಉಲ್ಲೇಖಿಸಿ ವಾಂಗ್​ಚುಕ್​​ ಅವರು ಕಳೆದ 20 ದಿನದಿಂದ ಉಪವಾಸ ಮಾಡುತ್ತಿದ್ದರು.21ನೇ ದಿನ ದೆಹಲಿಯ ಜಂತರ್​ ಮಂತರ್​ನಿಂದ ಅವರನ್ನು ಹೊತ್ತು ತಂದು, ಆಸ್ಪತ್ರೆಗೆ ದೆಹಲಿ ಪೊಲೀಸರು ದಾಖಲಿಸಿದ್ದರು. ಸೋನಮ್ ಅವರ ರಕ್ತದಲ್ಲಿ ಪೊಟ್ಯಾಸಿಯಂ ಹಾಗೂ ಗ್ಲೂಕೋಸ್ ಮಟ್ಟ ಕುಸಿದಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net