ಪತ್ನಿ ದೇಹವನ್ನು ಕುಕ್ಕರ್​ನಲ್ಲಿ ಬೇಯಿಸಿದ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್​! ಆರೋಪಿಗಿತ್ತು ಈ ಕೆಟ್ಟ ಚಟ... | Meerpet Murder case

ಮೀರ್‌ಪೇಟೆ ವೆಂಕಟ ಮಾಧವಿ ಕೊಲೆ ಪ್ರಕರಣ
ಮೀರ್‌ಪೇಟೆ ವೆಂಕಟ ಮಾಧವಿ ಕೊಲೆ ಪ್ರಕರಣ
Published on

ಪ್ರಮುಖ ಮುಖ್ಯಾಂಶಗಳು

  • 2025ರ ಜನವರಿಯಲ್ಲಿ ನಡೆದ ಭೀಕರ ಕೊಲೆ ಕೇಸ್​
  • ಪ್ರಸ್ತುತ, ಕೇಸ್​ ಟ್ರಯಲ್​ ನಡೆಯುತ್ತಿದೆ
  • ಪತ್ನಿಯನ್ನು ತುಂಡು ತುಂಡಾಗಿ ಕತ್ತರಿಸಿ, ಕೊಲೆಗೈದ ಗಂಡನಿಗಿತ್ತು ಅನೈತಿಕ ಸಂಬಂಧ
Meerpet Murder case: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಮೀರ್‌ಪೇಟೆ ವೆಂಕಟ ಮಾಧವಿ ಕೊಲೆ ಪ್ರಕರಣಕ್ಕೆ ಇದೀಗ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದೆ. 2025ರ ಜನವರಿಯಲ್ಲಿ  
ತನ್ನ ಪತ್ನಿಯನ್ನು ಭೀಕರವಾಗಿ ಕೊಲೆಗೈದ ಆರೋಪಿ ಪತಿ, ಆಕೆಯ ದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿ, ಕುಕ್ಕರ್​ನಲ್ಲಿ ಬೇಯಿಸಿ, ಒಣಗಿಸಿ, ಸುಟ್ಟು ಹಾಕಿ ಕೊಳಕ್ಕೆ ಎಸೆದಿದ್ದ ಎಂಬುದು ತನಿಖೆಯಲ್ಲಿ ಬಯಲಾಯಿತು. ಪ್ರಸ್ತುತ, ಈ ಕೇಸ್​ನ ಟ್ರಯಲ್​ ನಡೆಯುತ್ತಿದ್ದು,​ಖಾಕಿಗೆ ಆರೋಪಿ ಗುರುಮೂರ್ತಿಗೆ ಒಂದು ಹೆಣ್ಣಿನ ಜತೆ ಅಕ್ರಮ ಸಂಬಂಧವಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. ​
ಭಾರತೀಯ ಸೇನೆಯ ಮಾಜಿ ಜವಾನ ಗುರುಮೂರ್ತಿ ಯಾವುದೇ ಪುರಾವೆಗಳು ಸಿಗದಂತೆ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದ. ಆದರೆ, ಮನೆಯಲ್ಲಿ ದೊರೆತ ಅಂಗಾಂಶಗಳ ಆಧಾರದ ಮೇಲೆ ಪೊಲೀಸರು ಗುರುಮೂರ್ತಿಯನ್ನು ಬಂಧಿಸಿದರು. ಅಲ್ಲದೇ, ಅಂಗಾಂಶಗಳನ್ನು ಡಿಎನ್‌ಎ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಮಾಧವಿಯ ಅಂಗಾಂಶದ ಡಿಎನ್‌ಎ ಮತ್ತು ಅವಳ ಮಕ್ಕಳ ಡಿಎನ್‌ಎ ಜತೆಗೆ ಹೊಂದಿಕೆಯಾಗಿದೆ ಎಂದು ವಿಧಿವಿಜ್ಞಾನ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಮಾಧವಿ ಕೊಲೆಯಾಗಿರುವುದು ದೃಢವಾಯಿತು. ಇದಕ್ಕೂ ಮೊದಲು ಈ ಪ್ರಕರಣಕ್ಕೆ ಸರಿಯಾದ ಸಾಕ್ಷ್ಯಾಧಾರ ಸಿಗದೇ ಪೊಲೀಸರು ತೀರ ಪರದಾಡಿದ್ದರು.

ಎಷ್ಟೇ ಪಂಚಾಯ್ತಿ ನಡೆಸಿದ್ರು ಬದಲಾಗಲಿಲ್ಲ! 

ಇಲ್ಲಿಯವರೆಗೆ ಪೊಲೀಸರು 36 ಸಾಕ್ಷಿಗಳನ್ನು ಹೆಸರಿಸಿದ್ದು, ಅದರಲ್ಲಿ 20 ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದೆ. ವಿಚಾರಣೆಯ ಸಮಯದಲ್ಲಿ ಮತ್ತೊಂದು ಶಾಕಿಂಗ್ ವಿಷಯ ಬೆಳಕಿಗೆ ಬಂದಿದೆ. ಆರೋಪಿ ಗುರುಮೂರ್ತಿ ಓರ್ವ ವೇಶ್ಯೆ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ. ಈ ಸಂಬಂಧದಿಂದಾಗಿ ಗುರುಮೂರ್ತಿ ಮತ್ತು ಮಾಧವಿ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು ಎಂದು ತಿಳಿದುಬಂದಿದೆ. ಇದೇ ವಿಷಯದ ಬಗ್ಗೆ ಹಲವಾರು ಬಾರಿ ಪಂಚಾಯ್ತಿ ನಡೆದ ನಂತರವೂ ಗುರುಮೂರ್ತಿಯ ನಡವಳಿಕೆಯಲ್ಲಿ ಬದಲಾವಣೆ ಕಾಣಿಸಲಿಲ್ಲ. ಪತಿ-ಪತ್ನಿ ನಡುವೆ ಆಗಾಗ್ಗೆ ಅನೈತಿಕ ಸಂಬಂಧ ವಿಷಯಕ್ಕೆ ಜಗಳವಾಗುತ್ತಿದ್ದ ಕಾರಣಕ್ಕೆ ಗುರುಮೂರ್ತಿ ಮಾಧವಿಯನ್ನು ಕೊಲೆ ಮಾಡಿರುವುದಾಗಿ ವರದಿಯಾಗಿದೆ. 

ಏನಿದು ಪ್ರಕರಣ?

2025ರ ಜನವರಿ 16ರಂದು ಬೆಳಗ್ಗೆ 8 ಗಂಟೆಗೆ ಮಾಧವಿ ಎಚ್ಚರವಾದ ತಕ್ಷಣ ಮಾಧವಿ ಮತ್ತು ಗುರುಮೂರ್ತಿ ನಡುವೆ ಜಗಳ ನಡೆಯಿತು. ಜಟಾಪಟಿಯ ನಂತರ ಗುರುಮೂರ್ತಿ ಮಾಧವಿಯನ್ನು ಕೊಲ್ಲಲು ಮುಂದಾದನು. ಅದಕ್ಕಾಗಿಯೇ ಆಕೆಯ ಮೇಲೆ ಹಲ್ಲೆ ನಡೆಸಿದ. ಕೆನ್ನೆಗೆ ಬಾರಿಸಿ, ತಲೆಯನ್ನು ಗೋಡೆಗೆ ಗುದ್ದಿದ್ದಾನೆ. ಇದರಿಂದ ಮಾಧವಿ ತಕ್ಷಣ ಪ್ರಜ್ಞೆ ಕಳೆದುಕೊಂಡಳು. ಬಳಿಕ ಕೊಲ್ಲುವ ಉದ್ದೇಶದಿಂದಲೇ ಗುರುಮೂರ್ತಿ ಆಕೆಯ ಕತ್ತು ಹಿಸುಕಿದ್ದಾನೆ. ಆಕೆ ಸತ್ತಿದ್ದಾಳೆ ಎಂದು ಗೊತ್ತಾದ ಕೂಡಲೇ ಮಾಧವಿಯ ದೇಹದಿಂದ ಬಟ್ಟೆಗಳನ್ನು ತೆಗೆದಿದ್ದಾನೆ. 
ಬಳಿಕ ಶವವನ್ನು ಸ್ನಾನಗೃಹಕ್ಕೆ ತೆಗೆದುಕೊಂಡು ಹೋಗಿ, ಅಡುಗೆ ಮನೆಯಿಂದ ಹರಿತವಾದ ಆಯುಧ ತಂದನು. ಗುರುಮೂರ್ತಿ ಮೊದಲು ಮಾಧವಿಯ ಭುಜಗಳನ್ನು ಕತ್ತರಿಸಿ, ಮೃತ ದೇಹದಿಂದ ಕೈಗಳನ್ನು ಬೇರ್ಪಡಿಸಿದನು. ನಂತರ ಕಾಲುಗಳನ್ನು ಬೇರ್ಪಡಿಸಿದನು. ಆನಂತರ ಕೈ-ಕಾಲುಗಳನ್ನು ತುಂಡು ತುಂಡಾಗಿ ಕತ್ತರಿಸಿದನು. ಬಳಿಕ ತುಂಡುಗಳನ್ನು ನೀರು ತುಂಬಿದ ಬಕೆಟ್‌ನಲ್ಲಿ ಹಾಕಿ ವಾಟರ್ ಹೀಟರ್ ಆನ್ ಮಾಡಿ, ದೇಹದ ಭಾಗಗಳನ್ನು ಬೇಯಿಸಿದನು. ನಂತರ ಆ ಭಾಗಗಳನ್ನು ಬಕೆಟ್‌ನಿಂದ ಹೊರತೆಗೆದು ಒಲೆಯ ಮೇಲೆ ಹಾಕಿದನು. ಮಾಂಸವು ಸುಟ್ಟ ಬಳಿಕ ಮೂಳೆಗಳನ್ನು ಬೇರ್ಪಡಿಸಿ, ಅದನ್ನು ಪುಡಿ ಮಾಡಿದನು. ಇತರ ಕೆಲವು ಸಣ್ಣ ಮೂಳೆಗಳನ್ನು ಡಸ್ಟ್‌ಬಿನ್‌ಗೆ ಹಾಕಿದನು.
ಮನೆಯ ಬಾಗಿಲು, ಅಡುಗೆ ಕೋಣೆಯ ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿಟ್ಟೆ ಇದೆಲ್ಲವನ್ನೂ ಮಾಡಿದ್ದಾಗಿ ಆರೋಪಿ ಗುರುಮೂರ್ತಿ ಹೇಳಿದ್ದಾನೆ. ಇಡೀ ದೇಹವನ್ನು ತುಂಡುಗಳಾಗಿ ಮಾಡಲು ಸುಮಾರು 8 ಗಂಟೆಗಳ ಕಾಲ ಕಳೆದಿದ್ದಾನೆ. ಸಾಕ್ಷ್ಯವನ್ನು ನಾಶಪಡಿಸಲು ಡಿಟರ್ಜೆಂಟ್ ಮತ್ತು ಫೀನಾಲ್ ಅನ್ನು ಬಳಸಿದ್ದಾನೆ. ಈ ಘಟನೆಗೆ ಸಂಬಂಧಿಸಿದ ಒಟ್ಟು 16 ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಂಥಾ ಕೃತ್ಯ ಎಸಗಿದ್ದರೂ ಗುರುಮೂರ್ತಿಗೆ ಮಾತ್ರ ಯಾವುದೇ ಪಶ್ಚಾತ್ತಾಪ ಕಾಡಿಲ್ಲ. ಅವನು ಮಾನವ ರೂಪದಲ್ಲಿದ್ದ ರಾಕ್ಷಸನಂತೆ ವರ್ತಿಸಿದ್ದಾನೆ ಎಂದು ರಾಚಕೊಂಡ ಕಮಿಷನರ್ ಸುದೀರ್​ ಬಾಬು​ ತಿಳಿಸಿದ್ದಾರೆ. 
ಪ್ರಕಾಶಂ ಜಿಲ್ಲೆಯ ಗುರುಮೂರ್ತಿ ಮತ್ತು ವೆಂಕಟ ಮಾಧವಿ ಜಿಲ್ಲೆಲಗುಡದಲ್ಲಿ ವಾಸಿಸುತ್ತಿದ್ದರು. ತನ್ನ ಇಬ್ಬರು ಮಕ್ಕಳನ್ನು ತನ್ನ ಸಂಬಂಧಿಕರ ಮನೆಯಲ್ಲಿ ಬಿಟ್ಟುಬಂದು, ಹೆಂಡತಿಯನ್ನು ಕೊಲ್ಲುವ ಉದ್ದೇಶದಿಂದಲೇ ಜಗಳವಾಡಿದ್ದ. ಮಾಧವಿಯನ್ನು ಕೊಂದು, ಅವಳನ್ನು ಸುಟ್ಟು ಬೂದಿ ಮಾಡಿ ಕೊಳಕ್ಕೆ ಎಸೆದ ನಂತರ ಆತ ತನ್ನ ಇಬ್ಬರು ಮಕ್ಕಳನ್ನು ಮನೆಗೆ ಕರೆತಂದನು. ಬಳಿಕ ಮಕ್ಕಳಿಗೆ ತಾಯಿಯ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳಿದನು. ನಿಮ್ಮ ಅಮ್ಮ ನನ್ನೊಂದಿಗೆ ಜಗಳವಾಡಿದಳು, ನಮ್ಮನ್ನು ಬಿಟ್ಟು ಮನೆಯಿಂದ ಹೊರಟುಹೋದಳು ಎಂದು ನಂಬಿಸಿ, ಅವರ ದಿಕ್ಕನ್ನು ತಪ್ಪಿಸಿದ್ದ.(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net